ಮಸೂದ್ ಗುಂಪು ಹತ್ಯೆಗೆ ಸುಳ್ಯ ಯೂತ್ ಕಾಂಗ್ರೆಸ್ ವತಿಯಿಂದ ಖಂಡನೆ

Prasthutha|

ಸುಳ್ಯ: ಸುಳ್ಯ ಕಳಂಜ ಗ್ರಾಮದಲ್ಲಿ ಎಂಟು ಮಂದಿಯ ದುಷ್ಕರ್ಮಿಗಳ ತಂಡ ಮಸೂದ್ ಎಂಬ ಯುವಕನನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಇದೀಗ ಬಾಳಿ ಬದುಕಬೇಕಾದ ಯುವಕ ಮೃತಪಟ್ಟಿದ್ದು, ಘಟನೆಗೆ ಸುಳ್ಯ ಯೂತ್ ಕಾಂಗ್ರೆಸ್ ತೀವ್ರ ಖಂಡನೆಯನ್ನು ವ್ಯಕ್ತಪಡಿಸುತ್ತದೆ ಎಂದು ಅಧ್ಯಕ್ಷ ಹಮೀದ್ ಕುತ್ತಮಟ್ಟೆ ತಿಳಿಸಿದ್ದಾರೆ.

- Advertisement -

ಅಲ್ಲದೆ ಆರೋಪಿಗಳ ವಿರುದ್ಧ UAPA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ NIA ವತಿಯಿಂದ ತನಿಖೆ ನಡೆಸಬೇಕು ಮತ್ತು ಮೃತರ ಕುಟುಂಬಕ್ಕೆ ಕನಿಷ್ಟ 25 ಲಕ್ಷ ರೂ. ಪರಿಹಾರ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸ್ ಇಲಾಖೆಯ ಕಾರ್ಯದಕ್ಷತೆಗೆ ಹಮೀದ್ ಕುತ್ತಮಟ್ಟೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಮತ್ತು ಕೊಲೆಯ ಹಿಂದಿರುವ ಎಲ್ಲಾ ಷಡ್ಯಂತ್ರ್ಯಗಳನ್ನು ಬಯಲಿಗೆಳೆದು ಇದರ ಹಿಂದಿರುವ ನೈಜ ಸೂತ್ರಧಾರಿಗಳನ್ನು ತಕ್ಷಣ ಪತ್ತೆಹಚ್ಚಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp