ಸುಳ್ಯ: ಅಪಘಾತಕ್ಕೀಡಾದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು

Prasthutha|

ಸುಳ್ಯ: ಅಪಘಾತಕ್ಕೀಡಾದ ಗಾಯಾಳುಗಳನ್ನು ಮುಸ್ಲಿಂ ಯುವಕರು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಘಟನೆ ತಾಲೂಕಿನ ಪಡ್ಪಿನಂಗಡಿ ಎಂಬಲ್ಲಿ ನಡೆದಿದ್ದು, ಯುವಕರ ಮಾನವೀಯ ಕಾರ್ಯ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

- Advertisement -

ದಿನೇಶ್ ಮತ್ತು ದೇವಿಪ್ರಸಾದ್ ಎಂಬ ಯುವಕರು ಬೈಕ್ ನಲ್ಲಿ ಸಂಚರಿಸುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡಿದ್ದು, ಸ್ಥಳೀಯ ಮುಸ್ಲಿಂ ಯುವಕರಾದ ಎಣ್ಮೂರು ಮೂಲದ ಹಮೀದ್ ಮರಕ್ಕಡ,ಇರ್ಷಾದ್ ಎಂ.ಆರ್, ಮಿರ್ಶಾದ್ ಎಣ್ಮೂರು ಹಾಗೂ ಸಮಹಾದಿ ಮೂಲದ ನೌಫಲ್,ಬಾತಿಷಾ,ಸುಫೈಲ್,ಅರ್ಶಾಕ್ ಮತ್ತು ರಂಶಾದ್ ಎಂಬವರು ಕೂಡಲೇ ಧಾವಿಸಿ ತಮ್ಮದೆ ವಾಹನದಲ್ಲಿ ಕಾಣಿಯೂರು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

 ಕಾಣಿಯೂರು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆದುಕೊಂಡು ಹೋಗಬೇಕೆಂದು ವೈದ್ಯರು ಸೂಚಿಸಿದಾಗ ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿದಾಗ ಆ್ಯಂಬುಲೆನ್ಸ್ ಬರಲು ಸ್ವಲ್ಪ ತಡವಾಗುವುದನ್ನು ಅರಿತು ಬರೆಪ್ಪಾಡಿವರೆಗೆ ತಮ್ಮದೆ ವಾಹನದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಆ್ಯಂಬುಲೆನ್ಸ್ ಗೆ ಶಿಫ್ಟ್ ಮಾಡಿದಲ್ಲದೆ ಪುತ್ತೂರು ಆಸ್ಪತ್ರೆಗೆ ಸಾಗಿಸಿದ್ದಾರೆ.

 ಪುತ್ತೂರು ಆಸ್ಪತ್ರೆಯ ವೈದ್ಯರೂ ಕೂಡ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಸಾಗಿಸಬೇಕೆಂದು ಸೂಚಿಸಿದಾಗ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.  

ಹಿಂದೂ ಮುಸ್ಲಿಂ ಎಂಬ ಭೇದ ಭಾವದಿಂದ ಕರಾವಳಿಯಲ್ಲಿ ಕೆಲವು ಕೋಮುವಾದಿಗಳು ಅದೆಷ್ಟೋ ತಿಂಗಳುಗಳಿಂದ ನಿರಂತರವಾಗಿ ಕೋಮು ವೈಷಮ್ಯದ ವಿಷ ಬಿತ್ತುತ್ತಿರುವುದರ ನಡುವೆ ಇಂತಹ ಸನ್ನಿವೇಶದಲ್ಲೂ ಈ ಯುವಕರ ಮಾನವೀಯ ಕಾರ್ಯ ಶ್ಲಾಘನೀಯ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.



Join Whatsapp