ಸುಳ್ಯ: ಮನೆಗೆ ಪೈಟಿಂಗ್‌ ಕೆಲಸದ ವೇಳೆ ಮೇಲಿನಿಂದ ಬಿದ್ದು ಸಾವು

Prasthutha|

ಸುಳ್ಯ: ಮನೆಯ ಗೋಡೆಗೆ ಪೈಟಿಂಗ್‌ ಮಾಡುತ್ತಿದ್ದ ಕೆಲಸಗಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಅಡ್ಕಾರುನಲ್ಲಿ ಸಂಭವಿಸಿದೆ. ಕಾಸರಗೋಡಿನ ಅಬ್ದುಲ್‌ ಜಬ್ಬಾರ್‌ ಎನ್‌.ಎಂ. (42) ಮೃತರು.

- Advertisement -

ಮಾ. 7ರಂದು ಜಾಲ್ಸೂರು ಗ್ರಾಮದ ಅಡ್ಕಾರು ಜಿ.ಪಿ.ಅಬ್ದುಲ್ಲಾ ಕುಂಞಿ ಅವರ ಮನೆಯ ಗೋಡೆಗೆ ಪೈಟಿಂಗ್‌ ಕೆಲಸಕ್ಕೆ ಸ್ನೇಹಿತರೊಂದಿಗೆ ಹೋಗಿದ್ದ ಅಬ್ದುಲ್‌ ಜಬ್ಟಾರ್‌ ಕೆಲಸದ ಮಧ್ಯೆ ಎತ್ತರದಿಂದ ಬಿದ್ದು ಗಾಯಗೊಂಡಿದ್ದರು.

ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

- Advertisement -

ಆ ಬಳಿಕ ಗಾಯಾಳುವನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು, ಸಂಜೆ ವೇಳೆ ದೇಹವು ನಿಷ್ಕ್ರಿಯವಾಗಿರುವುದನ್ನು ಗಮನಿಸಿ ಸುಳ್ಯ ಆಸ್ಪತ್ರೆಗೆ ಕರೆದೊಯ್ದ ವೇಳೆ ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕೆಲಸದ ವೇಳೆ ಯಾವುದೇ ಮುಂಜಾಗ್ರತೆ ಇಲ್ಲದೆ ಕೆಲಸ ಮಾಡಿಸಿದ್ದರಿಂದ ಘಟನೆ ನಡೆದಿದೆ ಎಂದು ಮನೆ ಮಾಲಕರ ವಿರುದ್ಧ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp