ಸುಳ್ಯ: ಪ್ರಸಿದ್ಧ ಚೆನ್ನಕೇಶವ ಜಾತ್ರೋತ್ಸವ; ಸಂತೆ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡಿದ ದೇವಸ್ಥಾನ ಸಮಿತಿ

Prasthutha|

►ಮುಖಭಂಗಕ್ಕೀಡಾದ ಹಿಂಜಾವೇ

- Advertisement -

ಸುಳ್ಯ: ಪ್ರಸಿದ್ಧ ಚೆನ್ನಕೇಶವ ಜಾತ್ರೋತ್ಸವವು ಜ.03 ರಿಂದ ಜ.12 ರವರೆಗೆ ನಡೆಯಲಿದ್ದು, ಜಾತಿ, ಧರ್ಮ ಭೇದವಿಲ್ಲದೆ ಎಲ್ಲಾ ಸಂತೆ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ.


ಜಾತ್ರೋತ್ಸವದ ಸ್ವಾಗತ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಸಂತೆ ಏಲಂ ನಡೆಯಲಿದೆ ಎಂದು ತಿಳಿದು ಬಂದಿದೆ.

- Advertisement -


ಈ ಮಧ್ಯೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅನ್ಯ ಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಬ್ಯಾನರ್ ಅಳವಡಿಸಿತ್ತು. ಆದರೆ ದೇವಾಸ್ಥಾನ ಸಮಿತಿಯ ನಿರ್ಣಯವು ಹಿಂಜಾವೇ ಕಾರ್ಯಕರ್ತರನ್ನು ತೀವ್ರ ಮುಖಭಂಗಕ್ಕೀಡುಮಾಡಿದೆ.


ದೇವಸ್ಥಾನ ಸಮಿತಿಯ ಪರ ಧರ್ಮ ಸಹಿಷ್ಣುತೆ ಬಗೆಗಿನ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಸಹಿತ ಹಲವು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Join Whatsapp