ಬಿಜೆಪಿ ವಿರುದ್ಧ ಸೂಲಿಬೆಲೆ ಸರಣಿ ಟ್ವೀಟ್: ‘ಪೇಮೆಂಟ್ ಆಗಿಲ್ವಾ’ ಎಂದು ಪ್ರಶ್ನಿಸಿದ ನೆಟ್ಟಿಗರು

Prasthutha|

ಬೆಂಗಳೂರು: 2019 ರ ಚುನಾವಣೆಯಲ್ಲಿ ಮೋದಿ ಮತ್ತೆ ಅಧಿಕಾರಕ್ಕೇರಲು ವಿವಿಧ ಕಡೆ ಭಾಷಣ ಮಾಡುತ್ತಿದ್ದ ಬಿಜೆಪಿ ಪ್ರಚಾರಕ, ಭಾಷಣಗಾರ ಚಕ್ರವರ್ತಿ ಸೂಲಿಬೆಲೆ ಇದೀಗ ಬಿಜೆಪಿ ಸರಕಾರಕ್ಕೆ ತಿರುಗಿ ಬಿದ್ದಿದ್ದು, ಸರಣಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ವಲಯಗಳಲ್ಲಿ ನೆಟ್ಟಿಗರು ವಿಮರ್ಶಿಸಿದ್ದು ಚಕ್ರವರ್ತಿ ಸೂಲಿಬೆಲೆಗೆ ಈ ಬಾರಿಯ ಪೇಮೆಂಟ್ ಆಗಿಲ್ವಾ ಎಂದೆಲ್ಲಾ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ವಿರುದ್ಧ ಸತತವಾಗಿ ಟ್ವೀಟ್ ಮಾಡುತ್ತಿರುವ ಸೂಲಿಬೆಲೆ ದೇಶವು ಕೋವಿಡ್ ವಿರುದ್ಧ ಹೋರಾಡುತ್ತಿದ್ದಾಗ ಇಲ್ಲಿ ಬಿಜೆಪಿ ನಾಯಕರು ಹಾಸಿಗೆಗಳನ್ನು ಬಾಡಿಗೆಗೆ ಪಡೆಯುವ ಮೂಲಕ ಮತ್ತು ಪಿಪಿಇ ಕಿಟ್ಗಳು ಮತ್ತು ಇತರ ಕೋವಿಡ್ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಹಣ ಗಳಿಸುವಲ್ಲಿ ನಿರತರಾಗಿದ್ದರು. ಸ್ವಯಂಸೇವಕರಿಗೆ ತಿಳಿದಿತ್ತು, ಆದರೆ ನಮ್ಮ ರಾಷ್ಟ್ರವು ಎದುರಿಸುತ್ತಿರುವ ಪರಿಸ್ಥಿತಿಯಿಂದಾಗಿ ಅವರು ಮೌನವಾಗಿದ್ದರು. ಎಂದು ಹೇಳಿದ್ದಾರೆ.

- Advertisement -

ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ದಯನೀಯವಾಗಿ ವಿಫಲವಾಗಿದೆ.ಶಿಕ್ಷಕರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ, ಕಾರ್ಮಿಕರ ಸಮಸ್ಯೆಗಳು ಹಾಗೆಯೇ ಉಳಿದಿವೆ, ರೈತರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ. ಈ ವೈಫಲ್ಯಗಳನ್ನು ನಾವು ಪ್ರಶ್ನಿಸಿದರೆ ಅವರು ಕೋವಿಡ್ -19 ಅನ್ನು ತೋರಿಸುತ್ತಾರೆ ಎಂದು ಕರ್ನಾಟಕ ಬಿಜೆಪಿ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ.


ರಾಜ್ಯದ ಬಿಜೆಪಿ ಸರಕಾರವನ್ನು ಟೀಕಿಸುತ್ತಿರುವ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟನೊಬ್ಬ ಸತ್ತರೆ ಮುಖ್ಯಮಂತ್ರಿ ಗೆ ಅಲ್ಲೇ ಮೂರುದಿನ ಕಳೆಯಲು ಸಮಯವಿದೆ. ಆದರೆ ಬಿಜೆಪಿ ಕಾರ್ಯಕರ್ತರು ಸತ್ತರೆ ಪರಿಹಾರವಿಲ್ಲ ಎಂದು ಆರೋಪಿಸಿದ್ದಾರೆ.

- Advertisement -

ಸೂಲಿಬೆಲೆ ನಿರಂತರವಾಗಿ ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಯನ್ನು ಟೀಕಿಸುವುದರ ಮಧ್ಯೆ ಸೂಲಿಬೆಲೆ ನಡೆಯ ಕುರಿತು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಒಂದೋ ಸೂಲಿಬೆಲೆ ಮೊದಲ ಬಾರಿ ಸತ್ಯ ಮಾತಾಡಿದ್ದಾರೆ ಅಥವಾ ಈ ಬಾರಿಯ ಪೇಮೆಂಟ್ ಆಗಿಲ್ಲ ಎಂದು ಅಪಹಾಸ್ಯ ಮಾಡಿದ್ದಾರೆ.



Join Whatsapp