ಸಮಾಜದಲ್ಲಿ ವಿಷ ಬಿತ್ತುವ ಕೆಲಸವನ್ನು ಸೂಲಿಬೆಲೆ ಮಾಡುತ್ತಿದ್ದಾರೆ: ಮಧು ಬಂಗಾರಪ್ಪ

Prasthutha|

►ಸೂಲಿಬೆಲೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ

- Advertisement -

ಮೈಸೂರು: ಸಮಾಜದಲ್ಲಿ ವಿಷ ಬಿತ್ತುವ ಕೆಲಸವನ್ನು ಸೂಲಿಬೆಲೆ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಎಸ್ಸೆಸ್ಸೆಲ್ಸಿಯ ಎಲ್ಲ ಪರೀಕ್ಷೆಗಳು ಬೆಳಗಿನ ಸೆಷನ್ ನಲ್ಲಿ ನಡೆಸಲಾಗುತ್ತಿದೆ ಅದರೆ, ಮಾರ್ಚ್ ಒಂದರಂದು ಮಾತ್ರ ಒಂದು ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಅವತ್ತು ಶುಕ್ರವಾರ ಆಗಿರುವುದರಿಂದ ನಮಾಝ್ ಗೋಸ್ಕರ ವೇಳೆ ಬದಲಾಯಿಸಲಾಗಿದೆಯೇ ಅಂತ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ. ಟ್ವೀಟನ್ನು ಉಲ್ಲೇಖಿಸಿದ ಮಧು ಬಂಗಾರಪ್ಪ, ಸಮಾಜದಲ್ಲಿ ವಿಷ ಬಿತ್ತುವ ಕೆಲಸವನ್ನು ಸೂಲಿಬೆಲೆ ಮಾಡುತ್ತಿದ್ದಾರೆ ಎಂದು ಹೇಳಿದರು.

- Advertisement -


ಕನಿಷ್ಟ ಸಾಮಾನ್ಯ ಜ್ಞಾನವನ್ನಾದರೂ ಆವರು ಪ್ರದರ್ಶಿಸಬೇಕಿತ್ತು, ಅವತ್ತು ಯಾಕೆ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಅಂತ ಯೋಚಿಸುವ ವ್ಯವಧಾನವೂ ಅವರಿಗಿಲ್ಲ, ಅಸಲು ವಿಷಯವೇನೆಂದರೆ ಅದೇ ದಿನ ದ್ವಿತೀಯ ಪರೀಕ್ಷೆಗಳು ಆರಂಭವಾಗಲಿದ್ದು, ಬೆಳಗ್ಗೆ ಆ ಪರೀಕ್ಷೆ ನಡೆಯಲಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಎಂದರು.

ಕಾಮನ್ ಸೆನ್ಸ್ ಇಲ್ಲದೆ ಏನೇನೋ ಹೇಳುತ್ತಾರೆ. ಭಾವನಾತ್ಮಕ ಮಾಡಿದಷ್ಟೂ ನಿಮ್ಮನ್ನು ರಾಜ್ಯದ ಜನ ದೂರು ತಳ್ಳುತ್ತಾರೆ. ಅವನ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.



Join Whatsapp