ಮಸೀದಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದ ಸುಜಿತ್ ಶೆಟ್ಟಿ ಈ ಹಿಂದೆಯೂ ವಿಕೃತಿ ಮೆರೆದಿದ್ದ !

Prasthutha|

ಮಂಗಳೂರು: ತೊಕ್ಕೊಟ್ಟು ಹುದಾ ಜುಮಾ ಮಸೀದಿಗೆ ಅಕ್ರಮವಾಗಿ ನುಗ್ಗಿ ಮಹಿಳೆಯರು ನಮಾಝ್ ಮಾಡುತ್ತಿದ್ದಾಗ ಅಶ್ಲೀಲವಾಗಿ ವರ್ತಿಸಿದ ಕಾರ್ಕಳದ ಬೆಳ್ಮಣ್ ಮಂಜರೆಪಲ್ಕೆ ನಿವಾಸಿ ಸುಜಿತ್ ಶೆಟ್ಟಿ (26) ಈ ಹಿಂದೆ ಉಡುಪಿಯ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡಿದ್ದ. ಯುವತಿಯರ ಜೊತೆ ಅಶ್ಲೀಲವಾಗಿ ಫೋಟೋಗಳನ್ನು ತೆಗೆದು ವೈರಲ್ ಮಾಡಿ ವಿಕೃತಿ ಮೆರೆದಿದ್ದ ಕಾರಣದಿಂದ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ.

- Advertisement -

11ಕ್ಕೂ ಅಧಿಕ ಯುವತಿಯರೊಂದಿಗೆ ಅಶ್ಲೀಲವಾಗಿ ತೆಗೆದ ಫೋಟೋವನ್ನು ಸುಜಿತ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ.

ಆರೋಪಿ ಸುಜಿತ್ ತೊಕ್ಕೊಟ್ಟು ಬಳಿಯ ಬಾರ್ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

- Advertisement -

ಈಗಾಗಲೇ ಆತನನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತ ಯಾವ ಸಂಘಟನೆಗೆ ಸೇರಿದವನಾಗಿದ್ದಾನೆ, ಮಸೀದಿಗೆ ಅಕ್ರಮವಾಗಿ ಪ್ರವೇಶಿಸಲು ಈತನಿಗೆ ಪ್ರೇರಣೆ ನೀಡಿದವರು ಯಾರು ? ಎಂಬಿತ್ಯಾದಿ ವಿಷಯಗಳು ಇನ್ನೂ ಬಹಿರಂಗಗೊಂಡಿಲ್ಲ. ಈತನ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.



Join Whatsapp