ಬಂಡೇಮಠ ಶ್ರೀಗಳ ಆತ್ಮಹತ್ಯೆ ಪ್ರಕರಣ| ಆರೋಪಿಗಳ ಜಾಮೀನು ಅರ್ಜಿ ವಜಾ

Prasthutha|

ಬೆಂಗಳೂರು: ಮಾಗಡಿಯ ಕಂಚುಗಲ್ ಬಂಡೇ ಮಠದ ಶಿವೈಕ್ಯ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ರಾಮನಗರ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

ಕಳೆದ ಅ.24ರಂದು ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದರು, ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಡೆತ್ ನೋಟ್ ಆಧಾರದ ಮೇಲೆ ಕಣ್ಣೂರು ಮಠದ ಶ್ರೀ ಡಾ.ಮೃತ್ಯುಂಜಯ ಸ್ವಾಮೀಜಿ, ವಿದ್ಯಾರ್ಥಿನಿ ನೀಲಾಂಬಿಕೆ, ನಿವೃತ್ತ ಶಿಕ್ಷಕ ಮಹದೇವಯ್ಯ ಅವರನ್ನು ಬಂಧಿಸಿತ್ತು.

- Advertisement -

 ಮತ್ತೊಬ್ಬ ಆರೋಪಿ  ಬಿ ಸಿ ಸುರೇಶ್ ಎನ್ನುವವರು ತಲೆ ಮರೆಸಿಕೊಂಡಿದ್ದರು. ಈ ನಾಲ್ವರೂ ಆರೋಪಿಗಳು ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ರಾಮನಗರದ ಮೊದಲನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.

ಇದರೊಂದಿಗೆ ಎಲ್ಲಾ ಆರೋಪಿಗಳು ಮತ್ತಷ್ಟು ದಿನ ಜೈಲಿನಲ್ಲಿಯೇ ಕಾಲ ದೂಡಬೇಕಿದೆ.

- Advertisement -