SDPI ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಸುಹೈಲ್ ಖಾನ್, ಉಪಾಧ್ಯಕ್ಷರಾಗಿ ಸಿದ್ದೀಕ್ ಬೆಂಗರೆ ಆಯ್ಕೆ

Prasthutha|

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಪ್ರತಿನಿಧಿ ಸಭೆ ಮಂಗಳೂರು ಪುರಭವನ ದಲ್ಲಿ ನಡೆಯಿತು.

- Advertisement -

SDPI ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಸುಹೈಲ್ ಖಾನ್, ಉಪಾಧ್ಯಕ್ಷರಾಗಿ ಸಿದ್ದೀಕ್ ಬೆಂಗರೆ ಆಯ್ಕೆಯಾಗಿದರು.

ರಿಟರ್ನಿಂಗ್ ಆಫೀಸರ್ ಆಗಿ ನವಾಜ್ ಉಳ್ಳಾಲ ಹಾಗೂ ಯೂಸೂಫ್ ಆಲಡಿಕ್ಕ ಆಂತರಿಕ ಚುನಾವಣೆ ಪ್ರಕ್ರಿಯೆ ನೆರವೇರಿಸಿಕೊಟ್ಟರು. ಸಹಕರಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಎಲ್ಲಾ ನಾಯಕರು ಕಾರ್ಯಕರ್ತರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ತಳಮಟ್ಟದಲ್ಲಿ ಸಂಘಟಿಸಲು ರಾಜ್ಯ ಸಮಿತಿ ರಿಯಾಜ್ ಕಡಂಬು ರವರು ಮಾರ್ಗಧರ್ಶನ ನೀಡಿದರು.

- Advertisement -

ಜಿಲ್ಲಾ ಕಾರ್ಯದರ್ಶಿಗಳಾದ ಜಮಾಲ್ ಜೋಕಟ್ಟೆ ಹಾಗೂ ಅಸ್ರಫ್ ಅಡ್ಡೂರು ಮತ್ತು ವಿಮೆನ್ಸ್ ಇಂಡಿಯಾ ಮೂವ್ಮೆಂಟ್ ನ ಸದಸ್ಯೆಯರು ಉಪಸ್ಥಿತರಿದ್ದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ 2024-27 ರ ಅವಧಿಗೆ ಆಯ್ಕೆಯಾದ ನೂತನ ಸಾರಥಿಗಳು

– ಅಧ್ಯಕ್ಷರು: ಸುಹೈಲ್ ಖಾನ್

– ಉಪಾಧ್ಯಕ್ಷರು: ಸಿದ್ದೀಕ್ ಬೆಂಗರೆ

– ಕಾರ್ಯದರ್ಶಿ : ಅಲಿ ಅಕ್ಬರ್ ಮಿಲಾಯತ್

ಜೊತೆ ಕಾರ್ಯದರ್ಶಿ: ಲತೀಫ್ ಕುದ್ರೋಳಿ

– ಕೋಶಾಧಿಕಾರಿ : ಇಬ್ರಾಹಿಂ ದುಬಾಲ್

 ಸಮಿತಿ ಸದಸ್ಯರಾಗಿ

– ಶರೀಫ್ ಪಾಂಡೇಶ್ವರ

– ಬಶೀರ್ ಬಜಾಲ್

– ಇಮ್ತಿಯಾಜ್ ಬೆಂಗರೆ

– ಇಕ್ಬಾಲ್ ಕಣ್ಣೂರ್

ನೂತನ ಅಸೆಂಬ್ಲಿ ಕೌನ್ಸಿಲ್ ಸಾರಥಿಗಳಿಗೆ ಪಕ್ಷದ ಶಾಲು ಹಾಕಿ ಜಿಲ್ಲಾ ಸಮಿತಿಯಿಂದ ಅಭಿನಂದಿಸಲಾಯಿತು..

ಇಬ್ರಾಹಿಂ ದುಬಾಲ್ ಸ್ವಾಗತಿಸಿ,ಬಶೀರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಅಲಿ ಅಕ್ಬರ್ ವಂದಿಸಿದರು.



Join Whatsapp