ದುಬೈ ಕಾರ್ಯಕ್ರಮದಿಂದ ‘ಝೀ ನ್ಯೂಸ್’ ಪತ್ರಕರ್ತ ಸುಧೀರ್ ಚೌಧರಿಗೆ ಗೇಟ್ ಪಾಸ್ : ಟ್ವೀಟ್ ಮೂಲಕ ಮಾಹಿತಿ ಹಂಚಿದ ರಾಜಕುಮಾರಿ

Prasthutha: November 22, 2021

ದುಬೈ: ಝೀ ನ್ಯೂಸ್ ಮುಖ್ಯಸ್ಥ ಸುಧೀರ್ ಚೌಧರಿಯನ್ನು ನವೆಂಬರ್ 21ರ ಅಬುದಾಬಿ ಕಾಯಕ್ರಮದಿಂದ ಕೈಬಿಡಲಾಗಿದೆ ಎಂದು ಯುಎಇ ರಾಜಕುಮಾರಿ ಹೆಂದ್ ಬಿಂತ್ ಫೈಝಲ್ ಅಲ್ ಖಾಸಿಮ್ ತಿಳಿಸಿದ್ದಾರೆ.

ಈ ಹಿಂದೆ ಅಬುಧಾಬಿ ಚಾರ್ಟರ್ಡ್ ಅಕೌಂಟೆಂಟ್ಸ್ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಸುಧೀರ್ ಚೌಧರಿ ವಿರುದ್ಧ ಯುಎಇ ರಾಜಕುಮಾರಿ, ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ತೀವ್ರ ವಾಗ್ದಾಳಿ ನಡೆಸಿದ್ದರು.

ತನ್ನ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಹೆಂದ್ ಇಸ್ಲಾಮ್ ನ ಬಗ್ಗೆ ಅಸಹಿಷ್ಣುತೆ ಹೊಂದಿರುವ ವ್ಯಕ್ತಿಯನ್ನು ಯಾಕೆ ಯುಎಇ ಗೆ ಕರೆಯಿಸುತ್ತಿರುವಿರಿ ಎಂದು ಖಾರವಾಗಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಸುಧೀರ್ ಚೌಧರಿಯನ್ನು ಅಬುಧಾಬಿ ಚಾರ್ಟರ್ಡ್ ಅಕೌಂಟೆಂಟ್ ಒಕ್ಕೂಟ ತನ್ನ ಕಾರ್ಯಕ್ರಮದಿಂದ ಕೈಬಿಟ್ಟಿದೆ.

ಈ ಹಿಂದೆಯೂ ಕೂಡ ಸುಧೀರ್ ಚೌದರಿ, ಭಾರತದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ದ್ವೇಷವನ್ನು ಹರಡುತ್ತಿದ್ದರು ಎಂದು ಹೇಳಲಾಗಿದೆ. ಮಾತ್ರವಲ್ಲ ಝೀ ನ್ಯೂಸ್ ನಲ್ಲಿ ಪ್ರಸಾರವಾದ ಜಿಹಾದ್ ಚಾರ್ಟ್ ಎಂಬ ಸಂಚಿಕೆಗೆ ಸಂಬಂಧಿಸಿದಂತೆ ಚೌಧರಿ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!