ಸಚಿವರಾಗಲು ಸುಧಾಕರ್ ನಾಲಾಯಕ್ಕು: ಸಿದ್ದರಾಮಯ್ಯ

Prasthutha|

ಚಾಮರಾಜನಗರ: ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಿ.ಟಿ.ರವಿ ಹಗಲು ಕನಸು ಕಾಣುತ್ತಿದ್ದಾರೆ. ಮುಂದೆ ನಾವೇ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ 36 ಜನರು ಸತ್ತರು. ಅವರ ಸಾವಿಗೆ ಸುಧಾಕರ್ ಕಾರಣ. 36 ಜನರು‌ ಮೃತಪಟ್ಟರೂ ಮೂವರು ಮೃತಪಟ್ಟರು ಎಂದು ಸುಳ್ಳು ಹೇಳಿದ್ದರು. ಸಚಿವರಾಗಲು ಆತ ಲಾಯಕ್ಕಿಲ್ಲ ಎಂದು ಹೇಳಿದರು.

ಮೊದಲು ಹಗರಣದ ಬಗ್ಗೆ ತನಿಖೆ ಮಾಡಲಿ. ಅವರ ಮೇಲಿನ ಆರೋಪಗಳು ಸಾಬೀತಾಗುತ್ತವೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಸರ್ಕಾರದ ಇದೆ. ತನಿಖೆ ಮಾಡಬೇಕಾಗಿರುವವರೂ ಅವರೇ ಎಂದರು.

Join Whatsapp