ದೆಹಲಿ: ಇನ್ಫೋಸಿಸ್ ನ ಸುಧಾ ಮೂರ್ತಿ ಅವರು ಇಂದು (ಗುರುವಾರ) ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಮಾರಂಭಕ್ಕೆ ಸುಧಾ ಮೂರ್ತಿ ಪತಿ ಎನ್ ಆರ್ ನಾರಾಯಣ ಮೂರ್ತಿ ಕೂಡಾ ಉಪಸ್ಥಿತರಾಗಿದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ಸಂಸತ್ ಭವನದ ತಮ್ಮ ಚೇಂಬರ್ ನಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಭಾನಾಯಕ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು. ಇಂದು ರಾಜ್ಯಸಭೆ ಸದಸ್ಯರಾಗಿ ಕೂಡ ಅವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದರು.
ಕಳೆದ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.
#WATCH | Author and philanthropist Sudha Murty, nominated to the Rajya Sabha by President Droupadi Murmu, takes oath as a member of the Upper House of Parliament, in the presence of House Chairman Jagdeep Dhankhar
— ANI (@ANI) March 14, 2024
Infosys founder Narayan Murty and Union Minister Piyush Goyal… pic.twitter.com/vN8wqXCleB