ಸಿನಿಮಾಟೋಗ್ರಫಿ, ಸಿನಿಮಾ ಲೈಟಿಂಗ್ ಕುರಿತು ಸುಚಿತ್ರ ಅಕಾಡೆಮಿ ವತಿಯಿಂದ ತರಬೇತಿಗೆ ಅರ್ಜಿ ಆಹ್ವಾನ

Prasthutha|

ಬೆಂಗಳೂರು: ಸುಚಿತ್ರ ಅಕಾಡೆಮಿ ಹಾಗೂ ಸುಚಿತ್ರ ಪುರವಂಕರ ಸಿನಿಮಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಸಿನಿಮಾಸಕ್ತರಿಗೆ ಸಿನಿಮಾಟೋಗ್ರಫಿ ಹಾಗೂ ಸಿನಿಮಾ ಲೈಟಿಂಗ್ ಕುರಿತು ಅಕ್ಟೋಬರ್ 29 ರಿಂದ ಸುಚಿತ್ರ ಅಕಾಡೆಮಿಯಲ್ಲಿ ತರಬೇತಿ ಹಮ್ಮಿಕೊಂಡಿದೆ.

- Advertisement -

ಈ ಕೋರ್ಸ್ ಅನ್ನು ಜರ್ಮನ್ ನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಎಮಿಲ್ ಕಲುಸ್ ಅವರು ಬೋಧಿಸಲಿದ್ದಾರೆ. ಸಿನಿಮಾದಲ್ಲಿ ಬಹುಮುಖ್ಯವಾಗಿ ಸಿನಿಮಾಟೋಗ್ರಫಿ ಹಾಗೂ ಲೈಟಿಂಗ್ ಬಹಳ ಮುಖ್ಯ ಪಾತ್ರವಹಿಸುತ್ತದೆ. ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿದಾಗ ಮಾತ್ರ ಅತ್ಯತ್ತಮ ಸಿನಿಮಾ ನಿರ್ದೇಶಿಸಲು ಸಾಧ್ಯ. ಹೀಗಾಗಿ ಸುಚಿತ್ರ ಅಕಾಡೆಮಿಯು ಆಸಕ್ತರಿಗೆ ಈ ಕೋರ್ಸ್ ಆಯೋಜಿಸಿದೆ. ಸಿನಿಮಾಟೋಗ್ರಫಿ ಹಾಗೂ ಸಿನಿಮಾ ಲೈಟಿಂಗ್ನಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಕೆ, ಹಾಲಿವುಡ್ ನಲ್ಲಿ ಯಾವ ರೀತಿಯ ಲೈಟಿಂಗ್ ಬಳಕೆ ಮಾಡಲಾಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹೇಳಿಕೊಡಲಾಗುವುದು. ಆಸಕ್ತರು ಅಕ್ಟೋಬರ್ 25ರೊಳಗೆ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ school@scuhitra.org  ವೆಬ್ ಸೈಟ್ ಗೆ ಭೇಟಿ ನೀಡಬಹುದು ಅಥವಾ  080 26711785 | 9845055034 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



Join Whatsapp