ಪಿತ್ತರಸ ನಾಳದ ಕಲ್ಲುಗಳನ್ನು ಮುರಿದ ಸ್ಟೆಂಟ್ ನೊಂದಿಗೆ ತೆಗೆಯಲು ಫೋರ್ಟಿಸ್ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

Prasthutha|

ಬೆಂಗಳೂರು: 67 ವರ್ಷದ ವ್ಯಕ್ತಿಗೆ ಪಿತ್ತರಸ ನಾಳದಲ್ಲಿ ಕಲ್ಲುನ್ನು ತೆರೆಯುವ ವೇಳೆ ಹಾಕಲಾಗಿದ್ದ ಸ್ಟಂಟ್‌ ಮುರಿದು ಬಿದ್ದಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಫೊರ್ಟಿಸ್‌ ವೈದ್ಯರ ತಂಡ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದೆ.

- Advertisement -

ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್, ಅಡ್ವಾನ್ಸ್ಡ್ ಲ್ಯಾಪರೊಸ್ಕೋಪಿ, ಬಾರಿಯಾಟ್ರಿಕ್ ಸರ್ಜನ್‌ ಆಗಿರುವ ಡಾ. ರಾಮ್‌ರಾಜ್‌ ವೈದ್ಯರ ತಂಡ ಈ ಅಪರೂಪಕ ಪ್ರಕರಣವನ್ನು ನಿರ್ವಹಿಸಿದ್ದಾರೆ.

67 ವರ್ಷ ವಯಸ್ಸಿನ ವ್ಯಕ್ತಿಯೂ ಎರಡು ವರ್ಷಗಳ ಹಿಂದೆಯೇ ಪಿತ್ತಕೋಶದಲ್ಲಿ ಕಲ್ಲುಗಳನ್ನು ಹೊಂದಿದ್ದರು. ಈ ವೇಳೆ ಸ್ಟೆಂಟಿಂಗ್‌ ಹಾಕುವ ಮೂಲಕ ಕಲ್ಲುಗಳನ್ನು ಎಂಡೋಸ್ಕೋಪಿಕ್‌ ಮೂಲಕ ತೆಗೆದು ಹಾಕಲಾಗಿತ್ತು. ಆದರೆ, ಎರಡು ವರ್ಷಗಳ ಬಳಿಕ ರೋಗಿಗೆ ಸಾಮಾನ್ಯ ಪಿತ್ತರಸ ನಾಳದ ಕಲ್ಲುಗಳು (ಕೊಲೆಡೋಕೊಲಿಥಿಯಾಸಿಸ್) ಮತ್ತೊಮ್ಮೆ ಬೆಳೆದಿತ್ತು, ಜೊತೆಗೆ, ಪಿತ್ತರಸ ಸೋಂಕು (ಕೋಲಾಂಜೈಟಿಸ್) ಕಾಣಿಸಿಕೊಂಡಿತ್ತು. ಈ ವೇಳೆಗಾಗಲೇ ಈ ಹಿಂದೆ ಹಾಕಿದ್ದ ಸ್ಟೆಂಟ್‌ ಅಂಟಿಕೊಂಡು ಒಳಗೆ ಮುರಿದುಕೊಂಡಿತ್ತು. ಇದು ಪಿತ್ತರಸ ನಾಳದ ಕಲ್ಲುಗಳನ್ನು ತೆರೆಯುವ ಹಾದಿಯನ್ನು ಮುಚ್ಚಿತ್ತು. ಇದು ರೋಗಿಯ ಪರಿಸ್ಥಿತಿಯನ್ನು ಇನ್ನಷ್ಟು ಚಿಂತಾಜನಕವಾಗುವಂತೆ ಮಾಡಿತ್ತು. ಆದರೆ, ಫೊರ್ಟಿಸ್‌ ಆಸ್ಪತ್ರೆ ವೈದ್ಯರು, ಇದನ್ನು ಸವಾಲಾಗಿ ಸ್ವೀಕರಿಸಿ, ಲ್ಯಾಪರೊಸ್ಕೋಪಿಕ್ ಕಾಮನ್ ಪಿತ್ತರಸ ನಾಳದ ಅನ್ವೇಷಣೆ ಮತ್ತು ಕೊಲೆಡೋಕೋಸ್ಕೋಪಿಯೊಂದಿಗೆ ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿಗೆ ಮುಂದಾದರು, ಈ ವೇಳೆ ಲ್ಯಾಪರೊಸ್ಕೋಪಿ ಅಥವಾ ಸಣ್ಣ ಕೀ ರಂಧ್ರಗಳ ಮೂಲಕ ಪಿತ್ತಕೋಶದ ಕಲ್ಲುಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರು. ಜೊತೆಗೆ, ಈಗಾಗಲೇ ಮುರಿದಿದ್ದ ಸ್ಟಂಟ್‌ನನ್ನು ತೆಗೆಯುವುದು ವೈದ್ಯರಿಗೆ ಸವಾಲಾಗಿತ್ತು. ಆದರೆ ವೈದ್ಯರ ಶ್ರಮದಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದ್ದು, ರೋಗಿಯೂ ಆರೋಗ್ಯವಾಗಿದ್ದಾರೆ.



Join Whatsapp