ನವದೆಹಲಿ : “ಕುದುರೆಯನ್ನು ನೀರಿನ ಬಳಿ ಕೊಂಡೊಯ್ಯಬಹುದು, ಆದರೆ ನೀರು ಕುಡಿಯುವಂತೆ ಮಾಡಲು ಸಾಧ್ಯವಿಲ್ಲ” ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಮೋದಿ ಸರಕಾರವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.
ಲಡಾಖ್ ನಿಂದ ಚೀನಾದ ಪಡೆಗಳನ್ನು ವಿದೇಶಿ ಸಹಾಯವಿಲ್ಲದೆ ತೆರವುಗೊಳಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
1962ರ ಸೋಲು ನೆಹರೂ ಅವರ ಸೋಲು, ಭಾರತ ಮಾತೆಯ ಸೋಲಲ್ಲ ಎಂದು ನಾವು ನಮ್ಮ ಕ್ರಮದ ಮೂಲಕ ಸಾಬೀತು ಪಡಿಸಬೇಕು, ಹುಲ್ಲುಕಡ್ಡಿಗೆ ಜೋತುಬೀಳದೆ ನಾವು ಇದನ್ನು ಮಾಡಬೇಕು. ಅಂದರೆ, ವಿದೇಶಿ ಸಹಾಯವಿಲ್ಲದೆ ನಾವೂ ಚೀನೀ ಪಡೆಗಳನ್ನು ಲಡಾಖ್ ನಿಂದ ಹೊರದಬ್ಬಬೇಕು. ಹೇಗೆ? ಕುದುರೆಯನ್ನು ನೀರಿನ ಬಳಿಕ ಕೊಂಡೊಯ್ಯಬಹುದು, ಆದರೆ ಅದು ನೀರು ಕುಡಿಯುವಂತೆ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಸ್ವಾಮಿ ಟ್ವೀಟ್ ಮಾಡಿಲ್ಲ.
ಈ ಹಿಂದೆ ಪ್ರಧಾನಿ ಮೋದಿ, ಚೀನಾದ ಸೇನೆಯಿಂದ ಯಾವುದೇ ಅತಿಕ್ರಮಣ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದ ಬಗ್ಗೆಯೂ ಸ್ವಾಮಿ ಆಕ್ಷೇಪಿಸುವ ರೀತಿಯ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ. ಯಾರೂ ಬಂದಿಲ್ಲ, ಯಾರೂ ಹೋಗಿಲ್ಲ ಎಂದು ನಾವು ಎಷ್ಟು ಸಮಯ ಅಂದುಕೊಳ್ಳಬಹುದು? 2021, ಮಾರ್ಚ್-ಏಪ್ರಿಲ್ ವೇಳೆಗೆ ಪಿಎಲ್ ಎ ಅರುಣಾಚಲವನ್ನೂ ಪ್ರವೇಶಿಸಬಹುದು. ಇದು ಸತ್ಯದ ಕ್ಷಣವಾಗಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.