ಸ್ಪುಟ್ನಿಕ್​​​ ಲಸಿಕೆಗೆ ಅನುಮೋದನೆ ನೀಡಿದ ಡ್ರಗ್ ರೆಗ್ಯುಲೇಟಿಂಗ್​​​ನ ವಿಷಯ ತಜ್ಞರ ಸಮಿತಿ

Prasthutha|

- Advertisement -

ಹೊಸದಿಲ್ಲಿ: ಭಾರತದ ಡ್ರಗ್ ರೆಗ್ಯುಲೇಟಿಂಗ್​​​ನ ವಿಷಯ ತಜ್ಞರ ಸಮಿತಿ ರಷ್ಯಾದ ಸ್ಪುಟ್ನಿಕ್ ಲೈಟ್ ಒನ್ – ಶಾಟ್ COVID-19 ಲಸಿಕೆ ಬಳಕೆಗೆ ಶಿಫಾರಸು ಮಾಡಿದೆ.

ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ರಷ್ಯಾದ ಸ್ಪುಟ್ನಿಕ್ ಲೈಟ್‌ಗೆ ಶೀಘ್ರದಲ್ಲೇ ಅಂತಿಮ ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

- Advertisement -

ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ರಷ್ಯಾದ ನೇರ ಹೂಡಿಕೆ ನಿಧಿಯ (RDIF) ಪಾಲುದಾರರಾಗಿದ್ದು, ರಷ್ಯಾದ ಸ್ಪುಟ್ನಿಕ್ ಲೈಟ್ ಒನ್ ಶಾಟ್ ಅನ್ನು ಸಿಂಗಲ್ ಡೋಸ್ ಆಗಿ ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ಅನುಮೋದನೆಯನ್ನು ಕೋರಿದೆ.ಪ್ರಾಥಮಿಕ ಡೋಸ್ ಆಗಿ ನೀಡಲು ಶಿಫಾರಸು ಮಾಡಲಾಗಿದೆ. ಇತ್ತೀಚೆಗಷ್ಟೇ ಕಂಪನಿಯು ಇತರ ಲಸಿಕೆಗಳಿಗೆ ಬೂಸ್ಟರ್‌ನಂತೆ ಸ್ಪುಟ್ನಿಕ್ ಲೈಟ್‌ನ ಪ್ರಯೋಗಗಳನ್ನು ನಡೆಸಲು ಪ್ರಸ್ತಾವನೆ ಕೂಡಾ ಸಲ್ಲಿಕೆ ಮಾಡಿತ್ತು.



Join Whatsapp