ನೀರು ಎಂದು ಭಾವಿಸಿ ರಾಸಾಯನಿಕ ದ್ರಾವಣ ಕುಡಿದ ವಿದ್ಯಾರ್ಥಿಗಳು

Prasthutha|

ಕಲ್ಲಿಕೋಟೆ: ಉಪ್ಪಿನ ದ್ರಾವಣದಲ್ಲಿ ಹಾಕಿದ ತಿನಿಸುಗಳನ್ನು  ಮಾರಾಟ ಮಾಡುವ ಗೂಡಂಗಡಿಯಿಂದ ನೀರು ಎಂದು ಭಾವಿಸಿ ಆಕಸ್ಮಿಕವಾಗಿ ರಾಸಾಯನಿಕ ದ್ರಾವಣ ಕುಡಿದ ವಿದ್ಯಾರ್ಥಿಗಳಿಗೆ ಸುಟ್ಟ ಗಾಯಗಳಾದ ಘಟನೆಯು ಕಲ್ಲಿಕೋಟೆಯ ವರಕ್ಕಲ್ ಬೀಚ್ ನಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ತ್ರಿಕ್ಕರಿಪುರ ಆಯಿಟ್ಟಿ ಮೂಲದ ಮುಹಮ್ಮದ್ (14) ಮತ್ತು ಸಬೀದ್ (14) ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಮಕ್ಕಳು ಕಾಸರಗೋಡಿನಿಂದ ಕಲ್ಲಿಕೋಟೆ ಗೆ  ಸುತ್ತಾಡಲು ಬಂದಿದ್ದರು. ಬೀಚ್ ನಲ್ಲಿರುವ ಗೂಡಂಗಡಿಯಿಂದ  ಉಪ್ಪಿನ ದ್ರಾವಣದಲ್ಲಿ ಹಾಕಿದ ತಿನಿಸುಗಳನ್ನು  ತಿಂದ ಬಳಿಕ ಅವರಲ್ಲೊಬ್ಬನೀರು ಎಂದು ಭಾವಿಸಿ  ಪಕ್ಕದಲ್ಲಿದ್ದ ರಾಸಾಯನಿಕವನ್ನು ಕುಡಿದಿದ್ದಾನೆ.  ಕೂಡಲೇ ಅಸ್ವಸ್ಥಗೊಂಡ ಹುಡುಗ  ವಾಂತಿ ಮಾಡಿದ್ದಾನೆ. ಈ ವಾಂತಿಯ ಮೇಲೆ ಬಿದ್ದ ಮತ್ತೊಬ್ಬ ಹುಡುಗನ  ಮೈ ಸುಟ್ಟು ಹೋಗಿದೆ.

ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮುಹಮ್ಮದ್ ನನ್ನು ಪಯ್ಯನ್ನೂರಿಗೆ ಕರೆದೊಯ್ಯಲಾಗಿದ್ದು, ಸದ್ಯ ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದರಸಾ ಅಧ್ಯಯನ ಅಂಗವಾಗಿ ಪ್ರವಾಸ ಹೊರಟಿದ್ದ ಹುಡುಗರು ಕಲ್ಲಿಕೋಟೆಗೆ ಬಂದಿದ್ದರು. ಈ ಪ್ರದೇಶದ ಅಂಗಡಿಯವರು ಉಪ್ಪಿನ ದ್ರಾವಣದಲ್ಲಿ ಹಾಕಿಟ್ಟ ತಿನಿಸುಗಳು ಬೇಗ ಪಾಕವಾಗಲು ಕೆಲವು ರಾಸಾಯನಿಕಗಳನ್ನು ಬೆರೆಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ. ಹುಡುಗನ ಗಂಟಲು ಮತ್ತು ಅನ್ನನಾಳಕ್ಕೆ ಸುಟ್ಟ ಗಾಯಗಳಾಗಿವೆ ಎಂದು ವೈದ್ದರು ತಿಳಿಸಿದ್ದಾರೆ.



Join Whatsapp