ಕ್ಲಾಸ್ ಗೆ ಹಾಜರಾಗದ ವಿದ್ಯಾರ್ಥಿಗಳು: 24 ಲಕ್ಷ ರೂ.ವೇತನ ಹಿಂದಿರುಗಿಸಿದ ಕಾಲೇಜು ಉಪನ್ಯಾಸಕ

Prasthutha|

ಪಟ್ನಾ: 33 ತಿಂಗಳ ಕಾಲ ತನ್ನ ತರಗತಿಗೆ ಓರ್ವ ವಿದ್ಯಾರ್ಥಿ ಕೂಡ ಹಾಜರಾಗದ ಹಿನ್ನೆಲೆಯಲ್ಲಿ ಶಿಕ್ಷಕರೊಬ್ಬರು ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಈ ಅವಧಿಯಲ್ಲಿ ಸಿಕ್ಕಿದ 24 ಲಕ್ಷ ರೂ.ವೇತನವನ್ನು ಕಾಲೇಜಿಗೆ ಹಿಂದಿರಿಗಿಸಿದ ಪ್ರಸಂಗ ಬಿಹಾರದಲ್ಲಿ ನಡೆದಿದೆ.

- Advertisement -

ಬಿಹಾರದ ಮುಜಾಫರ್ ಪುರದ ನಿತಿಶೇಶ್ವರ ಕಾಲೇಜಿನಲ್ಲಿ 33ರ ಹರೆಯದ ಹಿಂದಿ ಶಿಕ್ಷಕ ಲಲನ್ ಕುಮಾರ್   2019ರ ಸೆಪ್ಟೆಂಬರ್ ನಿಂದ 33 ತಿಂಗಳ ಕಾಲ ಅವರ ತರಗತಿಗೆ ಯಾವುದೇ ವಿದ್ಯಾರ್ಥಿ ಹಾಜರಾಗಿಲ್ಲ. ಆದ್ದರಿಂದ ಅವರು ವಿದ್ಯಾರ್ಥಿಗಳಿಗೆ ಕಲಿಸದೆ ಸಂಬಳ ಇಟ್ಟುಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಹೇಳಿ ತನ್ನ ಎಲ್ಲಾ ವೇತನವನ್ನು ಹಿಂದಿರುಗಿಸಿದ್ದಾರೆ.

ನಿನ್ನೆ ಲಲನ್ ಕುಮಾರ್ ಅವರು ಬಿಆರ್ ಎಬಿಯು- ಬಿಆರ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾನಿಲಯಕ್ಕೆ ರೂ. 23,82,228 ಚೆಕ್ ಹಿಂದಿರುಗಿದರು. ಈ ಕಾಲೇಜು ವಿವಿ ಅಡಿ ಬರುತ್ತದೆ.

- Advertisement -

ಕಲಿಸದೆ ಸಂಬಳ ಒಳಗಿಟ್ಟುಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಆನ್ ಲೈನ್ ತರಗತಿ ನಡೆಸಿದಾಗಲೂ ಕೆಲವೇ ವಿದ್ಯಾರ್ಥಿಗಳು ಮಾತ್ರ ಅದಕ್ಕೆ ಹಾಜರಾದರು. ಕೆಲಸ ಮಾಡದ್ದಕ್ಕೆ ಸಂಬಳ ಪಡೆದರೆ ಅದು ನನಗೆ ಅಕಾಡೆಮಿಕ್ ಸಾವು ಆಗಿರುತ್ತದೆ ಎಂದು ಲಲನ್ ಕುಮಾರ್ ಹೇಳಿದರು.

1970ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಿತಿಶೇಶ್ವರ ಪ್ರಸಾದ್ ಸಿಂಗ್ ಈ ಕಾಲೇಜು ಸ್ಥಾಪಿಸಿದ್ದಾರೆ. ನಿತಿಶೇಶ್ವರ ಕಾಲೇಜು 1976ರಲ್ಲಿ ಬಿಆರ್ ಎಬಿಯು ವಿಶ್ವವಿದ್ಯಾನಿಲಯದ ಸುಪರ್ದಿಗೆ ಬಂದಿದೆ.

ಸಂಬಳ ಹಿಂದಿರುಗಿಸಿದ್ದರ ಉದ್ದೇಶವೇನು ಎಂದು ಪ್ರಿನ್ಸಿಪಾಲ್ ಮನೋಜ್ ಕುಮಾರ್ ಪ್ರಶ್ನಿಸಿದ್ದಾರೆ. “ವಿದ್ಯಾರ್ಥಿಗಳ ಗೈರು ಹಾಜರಿ ಎಂಬುದು ಇಲ್ಲಿ ವಿಷಯವಲ್ಲ. ಪೊಸ್ಟ್ ಗ್ರಾಜುಯೇಟ್ ಡಿಪಾರ್ಟ್ ಮೆಂಟಿಗೆ ವರ್ಗಾವಣೆ ಪಡೆಯಲು ನಡೆಸಿರುವ ಒತ್ತಡ ತಂತ್ರವಿದು” ಎಂದು ಅವರು ಹೇಳಿದರು.

“ಲಲನ್ ಕುಮಾರ್ ಕೂಡಲೆ ನಮ್ಮ ಗಮನ ಸೆಳೆಯಲು ಈ ಅರ್ಹತೆಯ ತಂತ್ರ ಎಸೆದಿದ್ದಾರೆ. ನಾವು ಇದನ್ನು ಉಪಕುಲಪತಿಗಳ ಜೊತೆಗೆ ಚರ್ಚಿಸುತ್ತಿದ್ದು, ನಿತೀಶೇಶ್ವರ ಕಾಲೇಜಿನ ಪ್ರಾಂಶುಪಾಲರಲ್ಲಿಯೂ ಗೈರು ಹಾಜರಿಯ ಮಾಹಿತಿ ಪಡೆಯಲಿದ್ದೇವೆ” ಎಂದು ರಿಜಿಸ್ಟ್ರಾರ್ ಆರ್. ಕೆ. ಠಾಕೂರ್ ಹೇಳಿದರು.

ಲಲನ್ ಕುಮಾರ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಮಾಸ್ಟರ್ಸ್ ಪದವಿ ಪಡೆದ ಬಳಿಕ, ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಮತ್ತು ಎಂಫಿಲ್ ಮಾಡಿದ್ದಾರೆ. ಅಕಾಡೆಮಿ ರೀತ್ಯಾ ಒಳಗೊಳ್ಳಲು ಸಾಧ್ಯವಾಗುವುದರಿಂದ ಪಿಜಿ ಡಿಪಾರ್ಟ್ ಮೆಂಟಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

ನಾನು ಕಲಿಸುವ ಕೆಲಸಕ್ಕೆ ಸೇರಿದ್ದು ಇಲ್ಲೇ ಮೊದಲು ಎಂದ ಲಲನ್ ಕುಮಾರ್, ನಾನು ನನ್ನ ಒಳ ದನಿಗೆ ಕಿವಿಗೊಟ್ಟು ಎರಡು ವರುಷ ಒಂಬತ್ತು ತಿಂಗಳ ಸಂಬಳ ವಿವಿಗೆ ಹಿಂದಿರುಗಿಸಲು ತೀರ್ಮಾನಿಸಿದೆ ಎಂದು ಹೇಳುತ್ತಾರೆ.

ನಿತಿಶೇಶ್ವರ ಕಾಲೇಜಿನಲ್ಲಿ 3,000ದಷ್ಟು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 1,100ರಷ್ಟು ಅಂಡರ್ ಗ್ರಾಜುಯೇಟ್ ವಿದ್ಯಾರ್ಥಿಗಳು ಹಿಂದಿ ಕಲಿಯುತ್ತಾರೆ. ಅಲ್ಲಿ ಹಿಂದಿ ಕಲಿಸುವವರು ಲಲನ್ ಕುಮಾರ್ ಮಾತ್ರ; ಇನ್ನೊಬ್ಬರು ಅತಿಥಿ ಉಪನ್ಯಾಸಕರಿದ್ದಾರೆ.

ಇಡೀ ಕಾಲೇಜಿನ ಒಟ್ಟು ಕಲಿಸುವವರು ಅತಿಥಿ ಉಪನ್ಯಾಸಕರೂ ಸೇರಿ 31.

ಸಾಂಕ್ರಾಮಿಕ ಸರಿಯಾಗಿ ಆರಂಭವಾಗುವುದಕ್ಕೆ ಮೊದಲೇ ವಿದ್ಯಾರ್ಥಿಗಳು ಏಕೆ ಗೈರು ಹಾಜರಾಗಿದ್ದಾರೆ? “ಅಡಿಗಡಿಗೆ ಆ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುವುದರಿಂದ ಅಕಾಡೆಮಿಕ್ ವರುಷವು ಸದಾ ಅಲ್ಲಿ ಬಾಧಿಸಲ್ಪಟ್ಟಿದೆ. ನಾನು ಸೇರಿದ ಕೆಲವೇ ತಿಂಗಳಲ್ಲಿ ಕೊರೋನಾ ಅಲೆ ಕೆಲವು ಬೀಸಿತು. ಆನ್ ಲೈನ್ ತರಗತಿ ನಡೆಸಿದೆವು. ಉಳಿದಂತೆ ವಿದ್ಯಾರ್ಥಿಗಳು ಗೈರು ಏಕೆಂದು ತಿಳಿಯದು” ಎನ್ನುತ್ತಾರೆ ಲಲನ್ ಕುಮಾರ್.



Join Whatsapp