ಕಾಲೇಜು ಆಹಾರ ಮೇಳದಲ್ಲಿ ಮಾಂಸಹಾರ ತಂದಿದ್ದ ವಿದ್ಯಾರ್ಥಿನಿಯರಿಗೆ ಸ್ಪರ್ಧಿಸಲು ಅವಕಾಶ ನಿರಾಕರಣೆ

Prasthutha|

ಸಾಗರ: ಕಾಲೇಜಿನ ಆಹಾರಮೇಳದಲ್ಲಿ ಮಾಂಸಾಹಾರ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಭಾಗವಹಿಸಲು ಅವಕಾಶ ನೀಡದಿರುವುದು ವಾಗ್ವಾದಕ್ಕೆ ಕಾರಣವಾಗಿದೆ.

- Advertisement -


ಸಾಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಕಲಾ ವಿಭಾಗದಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು. ಇಬ್ಬರು ವಿದ್ಯಾರ್ಥಿನಿಯರು ಮಲೆನಾಡಿನ ಸಾಂಪ್ರದಾಯಿಕ ಮಾಂಸಾಹಾರವಾದ ಕೋಳಿ ಕಜ್ಜಾಯ, ರೊಟ್ಟಿ ಸೇರಿದಂತೆ ಕೆಲವು ತಿನಿಸುಗಳನ್ನು ತಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಉಪನ್ಯಾಸಕರು, ‘ಮೇಳದಲ್ಲಿ ಮಾಂಸಾಹಾರಕ್ಕೆ ಅವಕಾಶವಿಲ್ಲ’ ಎಂದು ಹೇಳಿ ತಿನಿಸುಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಿದ್ದಾರೆ. ಇದು ವಾಗ್ವಾದಕ್ಕೆ ದಾರಿಯಾಗಿದೆ. ಬಳಿಕ ಆಹಾರ ಮೇಳದಲ್ಲಿ ಮಾಂಸಹಾರಕ್ಕೆ ಅವಕಾಶ ನೀಡಲಾಯಿತು.

Join Whatsapp