ಬಂಧಿತ ವಿದ್ಯಾರ್ಥಿ ನಾಯಕ ಆತಿಕುರ್ರಹ್ಮಾನ್ ಆರೋಗ್ಯ ಸ್ಥಿತಿ ಗಂಭೀರ | ಮತ್ತೊಮ್ಮೆ ದೆಹಲಿ AIMS ಗೆ ದಾಖಲು

Prasthutha|

ದೆಹಲಿ: ಉತ್ತರ ಪ್ರದೇಶದ ಮಥರಾ ಜೈಲಿನಲ್ಲಿ ಬಂಧಿತನಾಗಿರುವ ವಿದ್ಯಾರ್ಥಿ ನಾಯಕ ಹಾಗೂ ಸಂಶೋಧನಾ ವಿದ್ಯಾರ್ಥಿ ಆತಿಕುರ್ರಹ್ಮಾನ್ ಆರೋಗ್ಯ ಸ್ಥಿತಿ ಮತ್ತೊಮ್ಮೆ ಹದಗೆಟ್ಟಿದ್ದು ಭಾನುವಾರ ಬೆಳಿಗ್ಗೆ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

- Advertisement -

2020ರ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದ್ದ ದಲಿತ ಸಮುದಾಯದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ವರದಿಗಾಗಿ ಘಟನಾ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಇತರ ಮೂವರ ಜೊತೆ ಆತಿಕುರ್ರಹ್ಮಾನ್ ಅವರನ್ನೂ ಬಂಧಿಸಲಾಗಿತ್ತು. ಬಳಿಕ ಅವರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.  

“ಹತ್ರಾಸ್ ನ ನಕಲಿ ಕೇಸ್ ನಲ್ಲಿ ಬಂಧಿಸಲ್ಪಟ್ಟ ಆತಿಕುರ್ರಹ್ಮಾನ್ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಮತ್ತೊಮ್ಮೆ ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ. ಹೃದಯ ಸಂಬಂಧಿತ ಕಾಯಿಲೆ ಹೊಂದಿದ್ದರೂ ಅವರ ಜಾಮೀನು ಅರ್ಜಿಯನ್ನು ಎರಡೆರಡು ಬಾರಿ ವಜಾಗೊಳಿಸಲಾಗಿತ್ತು. ಅವರ ಆರೋಗ್ಯ ಸುಧಾರಣೆಗಾಗಿ ಎಲ್ಲರೂ ಪ್ರಾರ್ಥಿಸಿ” ಎಂದು ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್. ಸಾಜಿದ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

- Advertisement -

ಇದೇ ಬೆನ್ನಿಗೆ ಹಲವು ಮಂದಿ ಆತಿಕುರ್ರಹ್ಮಾನ್ ಬಿಡುಗಡೆಗಾಗಿ ಟ್ವೀಟ್ ಗಳ ಮೂಲಕ ಒತ್ತಾಯಿಸಿದ್ದಾರೆ.  

ಈ ಹಿಂದೆ 2021ರ ನವೆಂಬರ್ ತಿಂಗಳಿನಲ್ಲಿ ಆತಿಕುರ್ರಹ್ಮಾನ್ ಏಮ್ಸ್ ಗೆ ದಾಖಲಾಗಿ ಎರಡು ದಿನಗಳ ಚಿಕಿತ್ಸೆ ಪಡೆದಿದ್ದರು.      



Join Whatsapp