ರ್‍ಯಾಂಗಿಂಗ್ ನಿಂದ  ತಪ್ಪಿಸಿಕೊಳ್ಳಲು ಹಾಸ್ಟೆಲ್ ನಿಂದ ಜಿಗಿದ ವಿದ್ಯಾರ್ಥಿ: ಐವರ ಬಂಧನ

Prasthutha|

ಗುವಾಹಟಿ: ರ್‍ಯಾಂಗಿಂಗ್ ನಿಂದ  ಪಾರಾಗಲು ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಎರಡನೇ ಮಹಡಿಯಿಂದ ಜಿಗಿದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

- Advertisement -

ರ್‍ಯಾಂಗಿಂಗ್ ಮಾಡಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ದಿಬ್ರುಗಢ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಜೂನಿಯರ್ ವಿದ್ಯಾರ್ಥಿ ಆನಂದ್ ಶರ್ಮಾ ಹಾಸ್ಟೆಲ್ ನಿಂದ ಜಿಗಿದಿದ್ದು,  ತೀವ್ರವಾಗಿ ಗಾಯಗೊಂಡಿದ್ದಾನೆ. ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ.

- Advertisement -

ವಿದ್ಯಾರ್ಥಿಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವ ಮಾಜಿ ಹಾಗೂ ನಾಲ್ವರು ಹಾಲಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಈ ಕುರಿತು  ಟ್ವೀಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ದಿಬ್ರುಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ರ್‍ಯಾಂಗಿಂಗ್ ಆರೋಪದ ಪ್ರಕರಣದಲ್ಲಿ ಗಾಯಗೊಂಡಿರುವುದು ಗಮನಕ್ಕೆ ಬಂದಿದೆ. ತೀವ್ರ ನಿಗಾ ವಹಿಸಲಾಗಿದೆ ಮತ್ತು ಜಿಲ್ಲಾ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.  ಆರೋಪಿಗಳನ್ನು ಸೆರೆ ಹಿಡಿಯುವ ಪ್ರಯತ್ನಗಳು  ನಡೆಯುತ್ತಿದ್ದು, ಸಂತ್ರಸ್ತನಿಗೆ ವೈದ್ಯಕೀಯ ಆರೈಕೆಯನ್ನು ನೀಡಲಾಗುತ್ತಿದೆ ಎಂದರು.  ರ್‍ಯಾಂಗಿಂಗ್ ಬೇಡ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.

Join Whatsapp