ಭೀಕರ ಅಪಘಾತ: ಕಾರು ಗುದ್ದಿದ ರಭಸಕ್ಕೆ 15 ಅಡಿ ದೂರ ಹಾರಿ ಬಿದ್ದ ವಿದ್ಯಾರ್ಥಿನಿ

Prasthutha|

ರಾಯಚೂರು: ಬೈಕ್ ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯಾರ್ಥಿನಿಯರಿಗೆ ಜಾಗ್ವಾರ್ ಕಾರು ಗುದ್ದಿದ ಘಟನೆ ರಾಯಚೂರು ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.
ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement -


ರಾಯಚೂರು ನಗರದ ಅಂಬೇಡ್ಕರ್ ವೃತ್ತದಿಂದ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಕ್ರಾಸ್ ಮಾಡುವಾಗ ವೇಗವಾಗಿ ಬಂದ ಜಾಗ್ವಾರ್ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಗುದ್ದಿದೆ. ಪರಿಣಾಮ ಓರ್ವ ವಿದ್ಯಾರ್ಥಿನಿ ಅಲ್ಲೆ ನೆಲಕ್ಕೆ ಬಿದ್ದಿದ್ದು, ಮತ್ತೋರ್ವ ವಿದ್ಯಾರ್ಥಿನಿ 15 ಅಡಿ ದೂರದಲ್ಲಿ ಹಾರಿ ಬಿದ್ದಿದ್ದಾಳೆ. ಅದೃಷ್ಟವಶಾತ್ ಇಬ್ಬರೂ ಬದುಕುಳಿದಿದ್ದಾಳೆ.


ಬೈಕ್ ಸವಾರ ಶಿವರಾಜ್ ಪಾಟೀಲ್ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರನ್ನು ಶಿವಮಂಗಳ ಹಾಗೂ ಜ್ಯೋತಿ ಎಂದು ಗುರುತಿಸಲಾಗಿದೆ.
ಇನ್ನು ಈ ವಿಡಿಯೋ ವೈರಲ್ ಆಗಿರುವ ಬಗ್ಗೆ ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ ಬೈಕ್ ಹಾಗೂ ಕಾರು ಚಾಲಕನ ಡಿಎಲ್ ಸಸ್ಪೆಂಡ್ ಮಾಡುವಂತೆ ಟ್ವಿಟ್ಟರ್ ಮೂಲಕ ಸೂಚನೆ ನೀಡಿದ್ದಾರೆ.

- Advertisement -

Join Whatsapp