ವಿದ್ಯಾರ್ಥಿನಿ ಸರಿಯಾಗಿ ಓದಿಲ್ಲ ಎಂದು ಕಣ್ಣಿಗೆ ಹೊಡೆದು ಗಾಯಗೊಳಿಸಿದ್ದ ಶಿಕ್ಷಕಿಗೆ 3 ವರ್ಷ ಜೈಲು, 10 ಸಾವಿರ ರೂ ದಂಡ!

Prasthutha|

ತುಮಕೂರು: ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೋರ್ವಳು ಕಣ್ಣಿಗೆ ಹೊಡೆದು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿದಂತೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತುಮಕೂರು ಹೆಚ್ಚುವರಿ ಸಿವಿಲ್, ಜೆಎಂಎಫ್‌ ಸಿಯಿಂದ ಆದೇಶ ಹೊರಡಿಸಲಾಗಿದೆ.

- Advertisement -

2011ರ ಫೆ.17ರಂದು ಶಿಕ್ಷಕಿ ವಿದ್ಯಾರ್ಥಿನಿಗೆ ಹೊಡೆದಿದ್ದರು. ಸದ್ಯ ಈಗ ಇದರ ತೀರ್ಪು ಹೊರ ಬಿದ್ದಿದೆ.

ತುಮಕೂರು ನಗರದ ಭಾರತ್ ಮಾತಾ ಶಾಲೆಯ ಶಿಕ್ಷಕಿ ಫರಹತ್ ಫಾತಿಮಾ ವಿದ್ಯಾರ್ಥಿನಿಗೆ ಹೊಡೆದಿದ್ದರು. ಪಿಎಸ್ ಐ ದಿನೇಶ್ ಪಾಟೀಲ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶಾರದಾ ಕೊಪ್ಪದ ವಿಚಾರಣೆ ನಡೆಸಿ ಶಿಕ್ಷಕಿಗೆ ಕಲಂ 325 ರ ಅನ್ವಯ ಶಿಕ್ಷೆ ಪ್ರಕಟ ಮಾಡಿದ್ದಾರೆ.

Join Whatsapp