ತುಮಕೂರು: ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೋರ್ವಳು ಕಣ್ಣಿಗೆ ಹೊಡೆದು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿದಂತೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತುಮಕೂರು ಹೆಚ್ಚುವರಿ ಸಿವಿಲ್, ಜೆಎಂಎಫ್ ಸಿಯಿಂದ ಆದೇಶ ಹೊರಡಿಸಲಾಗಿದೆ.
2011ರ ಫೆ.17ರಂದು ಶಿಕ್ಷಕಿ ವಿದ್ಯಾರ್ಥಿನಿಗೆ ಹೊಡೆದಿದ್ದರು. ಸದ್ಯ ಈಗ ಇದರ ತೀರ್ಪು ಹೊರ ಬಿದ್ದಿದೆ.
ತುಮಕೂರು ನಗರದ ಭಾರತ್ ಮಾತಾ ಶಾಲೆಯ ಶಿಕ್ಷಕಿ ಫರಹತ್ ಫಾತಿಮಾ ವಿದ್ಯಾರ್ಥಿನಿಗೆ ಹೊಡೆದಿದ್ದರು. ಪಿಎಸ್ ಐ ದಿನೇಶ್ ಪಾಟೀಲ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶಾರದಾ ಕೊಪ್ಪದ ವಿಚಾರಣೆ ನಡೆಸಿ ಶಿಕ್ಷಕಿಗೆ ಕಲಂ 325 ರ ಅನ್ವಯ ಶಿಕ್ಷೆ ಪ್ರಕಟ ಮಾಡಿದ್ದಾರೆ.