ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Prasthutha|

ಬೆಂಗಳೂರು: ಅಪಾರ್ಟ್ಮೆಂಟಿನ 12ನೇ ಮಹಡಿಯಿಂದ ಜಿಗಿದು ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೆಳ್ಳಂದೂರಿನಲ್ಲಿ ಸಂಭವಿಸಿದೆ.

- Advertisement -


ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಜೆಸ್ಸಿಕಾ (14) ಎಂದು ಗುರುತಿಸಲಾಗಿದೆ.


ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಜೆಸ್ಸಿಕಾ ಮಂಗಳವಾರ ಬೆಳಗ್ಗೆ ಶಾಲೆಗೆ ಹೋಗಿದ್ದು ವಾಪಸ್ ಮನೆಗೆ ಬಂದಿದ್ದಾಳೆ. ಬೆಳಗ್ಗೆ 10.30ರ ಸುಮಾರಿಗೆ ಅಪಾರ್ಟ್ ಮೆಂಟ್ ಗೆ ಬಂದಿದ್ದ ಜೆಸ್ಸಿಕಾ 12ನೇ ಮಹಡಿಯಿಂದ ಹೊರಕ್ಕೆ ಹಾರಿ ಸಾವಿಗೆ ಶರಣಾಗಿದ್ದಾಳೆ.ಜೆಸ್ಸಿಕಾ ಕುಟುಂಬ ತಮಿಳುನಾಡಿನವರಾಗಿದ್ದು ತಂದೆ ಸಾಫ್ಟ್ವೇರ್ ಎಂಜಿನಿಯರ್, ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ.