ಅಪಾರ್ಟ್ ಮೆಂಟ್ ನಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Prasthutha|

ಬೆಂಗಳೂರು: 9ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಟರಾಯನಪುರದ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

- Advertisement -

ವಿಜಯಲಕ್ಷ್ಮೀ(17) ಆತ್ಮಹತ್ಯೆಗೆ ಶರಣಾದ ಯುವತಿ.


ಮೃತ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಓದುತಿದ್ದು, ತಂದೆ-ತಾಯಿಗೆ ವಿಚ್ಛೇದನವಾದ ಬಳಿಕ, ತನ್ನ ತಾಯಿ ಯಶೋಧ ಎಂಬುವವರ ಜೊತೆ ಜ್ಞಾನಭಾರತಿಯ ಜ್ಞಾನಜ್ಯೋತಿನಗರದಲ್ಲಿ ವಾಸವಿದ್ದಳು. ಕಳೆದ ಒಂದು ವಾರದಿಂದ ವಿಜಯಲಕ್ಷ್ಮಿ ಡಿಪ್ರೇಷನ್ ನಲ್ಲಿದ್ದಳು ಎಂದು ತಿಳಿದು ಬಂದಿದೆ.

Join Whatsapp