ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿಯ ಎಚ್ಚರಿಕೆ!

Prasthutha|

ಫಿಲಿಪೈನ್ಸ್: ಇಲ್ಲಿನ ಮಿಂಡನಾವೊದಲ್ಲಿ ಇಂದು 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 63 ಕಿ.ಮೀ (39 ಮೈಲಿ) ಆಳದಲ್ಲಿತ್ತು ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (EMSC) ತಿಳಿಸಿದೆ. ಮಾತ್ರವಲ್ಲ, ಭೂಕಂಪದ ಬಳಿಕ ಯುಎಸ್ ಸುನಾಮಿ ಎಚ್ಚರಿಕಾ ವ್ಯವಸ್ಥೆಯು ಸುನಾಮಿಯ ಎಚ್ಚರಿಕೆ ನೀಡಿದೆ.

- Advertisement -

ಕಳೆದ ತಿಂಗಳ ಆರಂಭದಲ್ಲಿ ದಕ್ಷಿಣ ಫಿಲಿಪೈನ್ಸ್‌ನಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಎಂಟು ಜನರು ಅಸುನೀಗಿದ್ದರು.

ಸಾರಂಗನಿ, ದಕ್ಷಿಣ ಕೊಟಾಬಾಟೊ ಮತ್ತು ದಾವಾವೊ ಆಕ್ಸಿಡೆಂಟಲ್ ಪ್ರಾಂತ್ಯಗಳಿಂದ ಸಾವುಗಳು ವರದಿಯಾಗಿದ್ದು, ಭೂಕಂಪದಿಂದ 13 ಜನರು ಗಾಯಗೊಂಡಿದ್ದಾರೆ, ಇದು ಹಲವಾರು ಜನರನ್ನು ಭಯಭೀತರನ್ನಾಗಿ ಮಾಡಿತು ಮತ್ತು 50ಕ್ಕೂ ಹೆಚ್ಚು ಮನೆಗಳು ಮತ್ತು ಇತರ ಕಟ್ಟಡಗಳಿಗೆ ಹಾನಿ ಮಾಡಿತು.



Join Whatsapp