ಕೊಪ್ಪಳದಲ್ಲಿ ವಿವಾದಕ್ಕೆ ಕಾರಣವಾದ ಬೀದಿದೀಪಗಳು: ಕಂಬಗಳ ತೆರವಿಗೆ SDPI ಆಗ್ರಹ

Prasthutha|

ಕೊಪ್ಪಳ: ಗಂಗಾವತಿ ನಗರದ ಮಹಾರಾಣಾ ಪ್ರತಾಪ್ ಸರ್ಕಲ್ ನಿಂದ ಜುಲೈನಗರದವರೆಗೂ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮದ ಚಿತ್ರಗಳಿರುವ ವಿದ್ಯುತ್ ಕಂಬಗಳನ್ನು ಹಾಕಿದ್ದಕ್ಕೆ ಎಸ್ ಡಿಪಿಐ ಆಕ್ಷೇಪ ವ್ಯಕ್ತಪಡಿಸಿದೆ.

- Advertisement -


ಅಯೋಧ್ಯೆ ಮಾದರಿಯಲ್ಲಿ ನಗರದ ಬೀದಿ ದೀಪದ ಕಂಬ ಅಳವಡಿಕೆಗೆ ಎಸ್ ಡಿಪಿಐ ವಿರೋಧ ವ್ಯಕ್ತಪಡಿಸಿದೆ. ಇದು ಕೇವಲ ಒಂದು ಧರ್ಮದ ಸಂಕೇತವಾಗಿದೆ. ಇದರಿಂದ ಗಂಗಾವತಿ ನಗರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂದು ಆರೋಪಿಸಿದೆ.


ಕೆಕೆಆರ್ ಡಿಬಿ ಅನುದಾನದಲ್ಲಿ ಕಂಬಗಳನ್ನು ಹಾಕಲಾಗಿತ್ತು. ಆದರೆ ಕಂಬಗಳ ಮೇಲೆ ಗದೆ, ಬಿಲ್ಲುಬಾಣ, ತಿರುಪತಿ ತಿಮ್ಮಪ್ಪನ ನಾಮದ ಚಿತ್ರಗಳಿದ್ದು ವಿದ್ಯುತ್ ಕಂಬಗಳ ತೆರವು ಮಾಡಲು SDPI ಮುಖಂಡರು ಆಗ್ರಹಿಸಿದ್ದಾರೆ.

- Advertisement -


ಕಂಬಗಳ ಅಳವಡಿಕೆಗೆ KRIDL ಏಜೆನ್ಸಿಗೆ KKRDB ಗುತ್ತಿಗೆ ನೀಡಿತ್ತು. ಕೂಡಲೇ ವಿದ್ಯುತ್ ಕಂಬ ತೆರವು ಮಾಡುವಂತೆ ಎಸ್ ಡಿಪಿಐ ಆಗ್ರಹಿಸಿದೆ. ಈ ಬಗ್ಗೆ ಗಂಗಾವತಿ ನಗರಸಭೆ ಆಯುಕ್ತರಿಗೆ ಎಸ್ ಡಿಪಿಐ ಮನವಿ ಸಲ್ಲಿಸಿದೆ.



Join Whatsapp