ದೇವಸ್ಥಾನದ ಆವರಣದಲ್ಲಿ ವೃದ್ಧೆಯ ಶವವನ್ನು ಕಚ್ಚಿತಿಂದ ಬೀದಿ ನಾಯಿಗಳು!

Prasthutha|

ಕಲಬುರಗಿ: ಬೀದಿನಾಯಿಗಳ ಗುಂಪೊಂದು ವೃದ್ಧೆಯ ಶವವನ್ನು ಎಳೆದಾಡಿ, ತಿಂದು ಹಾಕಿದ ದಾರುಣ ಘಟನೆ ಗಾಣಗಾಪುರ ಗ್ರಾಮದ ದ್ಯಾವಮ್ಮನ ಗುಡಿ ಪ್ರದೇಶದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಗಾಣಗಾಪುರದಲ್ಲಿರುವ 20 ವೃದ್ಧರನ್ನು ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಗಿದೆ.

- Advertisement -

ಬೀದಿಯಲ್ಲಿ ಮೃತಪಟ್ಟ ವೃದ್ಧೆಯ ಅನಾಥ ಶವವನ್ನು ಅಂತ್ಯಸಂಸ್ಕಾರ ಮಾಡದೆ ಅಲ್ಲೇ ಬಿಟ್ಟು ಹೋದ ಕಾರಣ, ಬೀದಿ ನಾಯಿಗಳ ಗುಂಪೊಂದು ಶವವನ್ನು ಕಚ್ಚಿ, ಹಲವು ಅಂಗಗಳನ್ನು ನುಂಗಿಹಾಕಿದೆ. ವೃದ್ಧೆಯು ಬೀದಿ ಬದಿಯಲ್ಲೇ  ಜೀವನ ನಡೆಸುತ್ತಿದ್ದು, ಅನಾರೋಗ್ಯ ಮತ್ತು ಸಮಯೋಚಿತ ವೈದ್ಯಕೀಯ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನೂರಾರು ನಿರ್ಗತಿಕ ಜನರು ದೇವಾಲಯದ ಹತ್ತಿರದ ರಸ್ತೆಗಳಲ್ಲಿ ವಾಸಿಸುತ್ತಿದ್ದು, ಪ್ರತಿ ಹುಣ್ಣಿಮೆ ಸಂದರ್ಭದಲ್ಲಿ ದ್ಯಾವಮ್ಮನ ಗುಡಿ ಪ್ರದೇಶದಲ್ಲಿ ವೃದ್ಧರನ್ನು ಬಿಟ್ಟುಹೋಗುವ ರೂಢಿ ಇದೆ, ಅದಲ್ಲದೆ ಅಲ್ಲಿ ಬೀದಿನಾಯಿಗಳ ಕಾಟವೂ ಹೆಚ್ಚಿದ್ದು ವೃದ್ಧರು ಭಯದಿಂದ ಬದುಕುತ್ತಿದ್ದಾರೆ. ಈ ಬಗ್ಗೆ ಮಾತಾಡಿದ ಜಿಲ್ಲಾಧಿಕಾರಿ ಇನ್ನುಮುಂದೆ ವೃದ್ಧರನ್ನು ಬಿಟ್ಟುಹೋಗುವವರ ವಿರುದ್ಧ ಪ್ರಕರಣ ದಾಖಲಿಸಲು  ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ, ಬೀದಿ ನಾಯಿಗಳ ಕಾಟ ತಪ್ಪಿಸುವ ಸಲುವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.



Join Whatsapp