ಬೀದಿ ನಾಯಿಗಳ ದಾಳಿ: ಏಳು ತಿಂಗಳ ಶಿಶು ಮೃತ್ಯು- ಆಕ್ರೋಶಿತರಿಂದ ಪ್ರತಿಭಟನೆ

Prasthutha|

ನವದೆಹಲಿ: ಬೀದಿ ನಾಯಿಗಳ ದಾಳಿಯಿಂದ ಏಳು ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಸೋಮವಾರ ದೆಹಲಿ ಸಮೀಪದ ನೋಯ್ಡಾ ಅಪಾರ್ಟ್’ಮೆಂಟ್ ನಲ್ಲಿ ನಡೆದಿದೆ.

- Advertisement -

ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಬೀದಿ ನಾಯಿಗಳ ಕುರಿತು ಸಾಕಷ್ಟು ಬಾರಿ ದೂರು ನೀಡಿದ ಹೊರತಾಗಿಯೂ ಕ್ರಮ ಕೈಗೊಳ್ಳಲು ವಿಫಲವಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಬೀದಿ ನಾಯಿಗಳ ದಾಳಿಯಿಂದ ಏಳು ತಿಂಗಳ ಮಗು ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ ಎಂದು ಸ್ಥಳೀಯ ನಿವಾಸಿ ಧರಮ್ ವೀರ್ ಯಾದವ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

- Advertisement -

ಸೋಮವಾರ ಸಂಜೆ 4.30ಕ್ಕೆ ನೋಯ್ಡಾದ ಸೆಕ್ತರ್ 100ರಲ್ಲಿರುವ ಲೋಟರ್ಸ್ ಬೌಲೆವಾರ್ಡ್ ಅಪಾರ್ಟ್’ಮೆಂಟ್’ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ರಜನೀಶ್ ವರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೃತ ಮಗುವಿನ ಪೋಷಕರು ಕಟ್ಟಡ ಕಾರ್ಮಿಕರಾಗಿದ್ದು, ಇಬ್ಬರೂ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಮಗುವನ್ನು ಹತ್ತಿರದಲ್ಲೇ ಇಟ್ಟುಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿತ್ತು ಎಂದು ವರ್ಮಾ ತಿಳಿಸಿದರು.



Join Whatsapp