ಮುಂಬೈ: ಬಿರುಗಾಳಿ ಮತ್ತು ಮಳೆಗೆ ಮುಂಬೈ ಮಹಾನಗರಿ ಜನಜೀವನ ಅಸ್ತವ್ಯಸ್ತವಾಗಿದೆ. ಘಾಟ್‌ಕೋಪರ್ ಪ್ರದೇಶದ ಚೆಡ್ಡಾನಗರ ಜಂಕ್ಷನ್‌ನಲ್ಲಿ ಪೆಟ್ರೋಲ್ ಪಂಪ್‌ನಲ್ಲಿ 100 ಅಡಿ ಎತ್ತರದ ಅಕ್ರಮ ಜಾಹೀರಾತು ಫಲಕ ಬಿದ್ದಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 59 ಮಂದಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘಾಟ್‌ಕೋಪರ್‌ನಲ್ಲಿ ಹೋರ್ಡಿಂಗ್ ಕುಸಿದ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ
ಮತ್ತೊಂದು ಘಟನೆಗಲ್ಲಿ ವಡಾಲಾ ಪ್ರದೇಶದಲ್ಲಿ ಬಿರುಗಾಳಿಗೆ ನಿರ್ಮಾಣ ಹಂತದಲ್ಲಿರುವ ಲೋಹದ ಪಾರ್ಕಿಂಗ್ ಟವರ್ ರಸ್ತೆಯ ಮೇಲೆ ಕುಸಿದು ಮೂವರು ವ್ಯಕ್ತಿಗಳು ಗಾಯಗೊಂಡಿದ್ದು, ಅನೇಕ ವಾಹನಗಳು ಜಖಂಗೊಂಡಿವೆ.
15 ವಿಮಾನಗಳನ್ನು ವಿವಿಧ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು ಮತ್ತು ರನ್‌ವೇಗಳ ಕಾರ್ಯಾಚರಣೆಯು ಸಂಜೆ 5.03 ಕ್ಕೆ ಪುನರಾರಂಭವಾಯಿತು ಎಂದು ವಿಮಾನ ನಿಲ್ದಾಣದ ನಿರ್ವಾಹಕರು ತಿಳಿಸಿದ್ದಾರೆ.