ಸೌಹಾರ್ದತೆ ಕದಡುವ ಕೆಲಸವನ್ನು ನಿಲ್ಲಿಸಿರಿ: ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯಿರಿ- ಸಿಪಿಐಎಂ

Prasthutha|

ಬೆಂಗಳೂರು: ಜನದೇಶವಿಲ್ಲದೇ ಬಲವಂತವಾಗಿ ಅಧಿಕಾರ ಮುನ್ನಡೆಸುತ್ತಿರುವ ರಾಜ್ಯ ಸರ್ಕಾರ, ರಾಜ್ಯದ ಸೌಹಾರ್ದತೆಗೆ ಭಂಗ ತರುವ ಕೆಲಸವನ್ನು ನಿಲ್ಲಿಸಬೇಕು ಮತ್ತು ಈ ಕೂಡಲೇ, ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ, ರೈತರು ಹಾಗೂ ಕಾರ್ಮಿಕರ ವಿರೋಧಿಯಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ವಾಪಾಸು ಪಡೆಯಬೇಕು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ಜಾರಿ ಮತ್ತು ದಲಿತರು, ಮಹಿಳೆಯರು ಹಾಗೂ ಬಡವರ ವಿರೋಧಿಯಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಳನ್ನು ಕೂಡಲೇ ನಿಲ್ಲಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಈ ಕುರಿತು ಅಗತ್ಯ ಕ್ರಮವಹಿಸದೇ, ಕೋಮುವಾದಿ ಶಕ್ತಿಗಳ ಜೊತೆ ಕೈ ಜೋಡಿಸುವ ಮೂಲಕ ರಾಜ್ಯದ ಹೋರಾಟ ನಿರತ ಜನತೆಯ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವನ್ನು ಕರ್ನಾಟಕ ರಾಜ್ಯ ಸರಕಾರ ಅನುಸರಿಸುತ್ತಿರುವುದು ತೀವ್ರ ಖಂಡನೀಯ. ಸಂವಿಧಾನ ಹಾಗೂ ದಲಿತರು, ಅಲ್ಪಸಂಖ್ಯಾತರ ಮತ್ತು ಹೈನುಗಾರರ ವಿರೋಧಿಯಾದ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಹಾಗೂ ಎಲ್ಲ ಶೂದ್ರ ಹಾಗೂ ದಲಿತರು ಮತ್ತು ಮಹಿಳಾ ಸಮುದಾಯದ ವಿರೋಧಿಯಾದ ಮತಾಂತರ ನಿಷೇಧ ಮತ್ತು ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯು ಸಂರಕ್ಷಣೆಯಂತಹ ಕರಾಳ ಕಾಯ್ದೆಗಳ ರಚನೆಯ ಮೂಲಕ ಹಿಂದುತ್ವ ಕೋಮುವಾದಿ ಶಕ್ತಿಗಳ ಬೆಳವಣಿಗೆಗೆ ಸಹಕರಿಸುವ ಹಾಗೂ ರಾಜ್ಯದ ಸೌಹಾರ್ದವನ್ನು ಕದಡುವ ಕೆಲಸದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮತೀಯ ದ್ವೇಷ ಹೆಚ್ಚಿಸಿ ಜನತೆಯ ಗಮನವನ್ನು ಬೇರೆಡೆ ಸೆಳೆದು, ಮೋಸದ ಮೂಲಕ ಕರ್ನಾಟಕದ ಎಲ್ಲ ಸಂಪನ್ಮೂಲಗಳ ಕಾರ್ಪೊರೇಟ್ ಲೂಟಿಗೆ ತೆರೆಯುವ ಇಂತಹ ಕುತಂತ್ರಗಳನ್ನು ತಕ್ಷಣವೇ ನಿಲ್ಲಿಸಬೇಕು. ರಾಜ್ಯದ ಜನತೆ ಐಕ್ಯತೆಯಿಂದ ಇಂತಹ ಕುತಂತ್ರವನ್ನು ಮತ್ತು ಕಾರ್ಪೊರೇಟ್ ಕಂಪನಿಗಳ ಲೂಟಿಕೋರ ನೀತಿಗಳನ್ನು ಸೋಲಿಸಬೇಕೆಂದು ರಾಜ್ಯದಲ್ಲಿ ಸೌಹಾರ್ದತೆಯನ್ನು ಬಲಗೊಳಿಸಬೇಕೆಂದು ಅವರು ಕರೆ ನೀಡಿದರು.

- Advertisement -

ಕಾಂತರಾಜು ಆಯೋಗದ ಅಂಕಿ ಅಂಶ ಬಳಸಿ – ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ

ನಿಖರ ಅಂಕಿ ಅಂಶಗಳೊಂದಿಗೆ ತ್ರಿಸ್ತರದ ಪರಿಶೀಲನೆ ಬಳಿಕವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವುದು ಅಥವಾ ನಿಖರ ಅಂಕಿ ಅಂಶಗಳು ಇಲ್ಲವೆಂದು ಆ ಸ್ಥಾನಗಳನ್ನು ಸಾಮಾನ್ಯ ಸ್ಥಾನಗಳೆಂದು ಘೋಷಿಸಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡೆಗಣಿಸಿ ಚುನಾವಣೆಗಳನ್ನು ನಡೆಸುವುದು. ಈ ಎರಡೂ ಕೂಡಾ ತಪ್ಪಾದ ಕ್ರಮಗಳಾಗುತ್ತವೆಂದು ಅವರು ಹೇಳಿದರು.



Join Whatsapp