ರಾಣಾ ಅಯ್ಯುಬ್ ರನ್ನು ಗುರಿಯಾಗಿಸುವುದನ್ನು ನಿಲ್ಲಿಸಿ: ಭಾರತೀಯ ಅಧಿಕಾರಿಗಳಿಗೆ ಜಾಗತಿಕ ಮಾಧ್ಯಮ ಸಂಸ್ಥೆ ಸೂಚನೆ

Prasthutha|

ಮುಂಬೈ: ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಆನ್ ಲೈನ್ ಕಿರುಕುಳ, ಮಾನಸಿಕ ಹಿಂಸೆ, ಬೆದರಿಕೆ ಮತ್ತು ಹರಿಹಾಯುವ ಅಭಿಯಾನವನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಭಾರತೀಯ ಅಧಿಕಾರಿಗಳಿಗೆ “ರಿಪೋರ್ಟರ್ಸ್ ವಿದೌಟ್ ಬಾರ್ಡರ್” –ಆರ್ ಎಸ್ ಎಫ್ ಕರೆ ನೀಡಿದೆ.

- Advertisement -

ಆನ್ ಲೈನ್ ಅಭಿಯಾನದ ಮೂಲಕ ಹಣವನ್ನು ಸಂಗ್ರಹಿಸಿದ ಆರೋಪದಲ್ಲಿ ರಾಣಾ ವಿರುದ್ಧ ಉತ್ತರಪ್ರದೇಶದ ಗಾಝಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
ರಾಣಾ ಅಯ್ಯೂಬ್ ಅವರು ಹಿಂದೂ ರಾಷ್ಟ್ರೀಯವಾದಿ ಚಳುವಳಿಗೆ ದೊಡ್ಡ ಬೆದರಿಕೆಯಾಗಿದ್ದಾರೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಅತ್ಯಂತ ಅಪಾಯಕಾರಿ ಬೆದರಿಕೆಯನ್ನು ಎದುರಿಸುತ್ತಿರುವ ಹತ್ತು ಪತ್ರಕರ್ತರಲ್ಲಿ ಅವರು ಕೂಡ ಒಬ್ಬರೆಂದು ಟೈಮ್ಸ್ ಮ್ಯಾಗಝಿನ್ ತಿಳಿಸಿದೆ.
ಕಳೆದ 3 ವರ್ಷಗಳಿಂದ ರಾಣಾ ಅಯ್ಯೂಬ್ ವಿರುದ್ಧ ಸೈಬರ್ ಕಿರುಕುಳ ನಡೆಯುತ್ತಲೇ ಇದೆ. ಆಕೆಯ ವಿರುದ್ಧ ಹಿಂದೂ ರಾಷ್ಟ್ರೀಯವಾದಿ ಕಾರ್ಯಕರ್ತರು ಸುಳ್ಳು ಮಾಹಿತಿ ಮತ್ತು ದೂರನ್ನು ದಾಖಲಿಸುತ್ತಿದ್ದಾರೆ ಎಂದು ಆರ್.ಎಸ್.ಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಆಕೆಯನ್ನು ರಕ್ಷಿಸಲು ಮತ್ತು ಆಕೆಯ ವಿರುದ್ಧ ದ್ವೇಷದ ಅಭಿಯಾನವನ್ನು ಕೈಗೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರ್.ಎಸ್.ಎಫ್ ನ ಏಷ್ಯಾ – ಪೆಸಿಫಿಕ್ ಮುಖ್ಯಸ್ಥ ಡೇನಿಯಲ್ ಬಾಸ್ಟರ್ಡ್ ತಿಳಿಸಿದ್ದಾರೆ.

- Advertisement -


ಈ ಮಧ್ಯೆ ಅಯ್ಯೂಬ್ ವಿರುದ್ಧ ಕಳೆದ ವಾರ ಯುಪಿ ಪೊಲೀಸರು ದಾಖಲಿಸಿದ ಎಫ್.ಐ.ಆರ್ ದುರುದ್ದೇಶಪೂರಿತ ಮತ್ತು ಆಧಾರರಹಿತ. ಈ ರೀತಿಯ ಬೆಳವಣಿಗೆಯಿಂದ ಅಧಿಕಾರಿ ವರ್ಗದ ವಿರುದ್ಧ ಸತ್ಯವನ್ನು ನುಡಿಯುವುದನ್ನು ತಡೆಯಲಾಗುವುದಿಲ್ಲ ಎಂದು ಅವರು ತಿಳಿಸಿದರು



Join Whatsapp