ಮಳಲಿ ಮಸ್ಜಿದ್ ವಿಚಾರ ಮುಂದಿಟ್ಟು ಶಾಂತಿ ಕೆಡಿಸುವ ಸಂಘಪರಿವಾರದ ಹುನ್ನಾರಕ್ಕೆ ಕಡಿವಾಣ ಹಾಕಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್

Prasthutha|

ಮಂಗಳೂರು: ಮಳಲಿ ಮಸ್ಜಿದ್ ವಿಚಾರವನ್ನು ವಿವಾದಕ್ಕೆ ಗುರಿಪಡಿಸಿಕೊಂಡು ಜಿಲ್ಲೆಯ ಶಾಂತಿ ಕೆಡಿಸುವ ಸಂಘಪರಿವಾರದ ಶಕ್ತಿಗಳ ಹುನ್ನಾರಕ್ಕೆ ಕಡಿವಾಣ ಹಾಕಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಹನೀಫಿ ಆಗ್ರಹಿಸಿದ್ದಾರೆ.

- Advertisement -

ಮಳಲಿ ಮಸೀದಿಗೆ ನೂರಾರು ವರುಷಗಳ ಇತಿಹಾಸವಿದೆ ಅನ್ನುವುದನ್ನು ಮಸ್ಜಿದ್ ಕುರಿತಾದ ದಾಖಲೆಗಳು ಬಹಳ ಸ್ಪಷ್ಟಪಡಿಸುತ್ತಿವೆ. ಆದರೂ ಸಂಘಪರಿವಾರದ ಶಕ್ತಿಗಳು ಕೋಮು ಧ್ರವೀಕರಣಕ್ಕಾಗಿ ಅದನ್ನು ಅನಗತ್ಯ ವಿವಾದಕ್ಕೆ ಗುರಿಪಡಿಸಿವೆ.

ದಾಖಲೆ, ವಾಸ್ತವಾಂಶಗಳ ಆಧಾರದ ಮೇಲೆ ತುರ್ತಾಗಿ ಸ್ಪಂದಿಸಬೇಕಾಗಿದ್ದ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಳವಳಕಾರಿ. ಇದೀಗ ತಾಂಬೂಲ ಪ್ರಶ್ನೆಯ ಮೂಲಕ ಹಿಂದು ಸಮುದಾಯವನ್ನು ಭಾವನಾತ್ಮಕವಾಗಿ ಕೆರಳಿಸುವ ಪ್ರಯತ್ನ ನಡೆಸಲಾಗಿದೆ. ಹಿಜಾಬ್, ಆಝಾನ್ ಮೊದಲಾದ ಶರೀಅತ್ ಗೆ ಸಂಬಂಧಿಸಿದ ವಿಚಾರಗಳನ್ನು ವೃಥಾ ವಿವಾದಕ್ಕೆ ಒಳಪಡಿಸುತ್ತಾ ಬಂದ ಸಂಘಪರಿವಾರವು ಇದೀಗ ವಕ್ಫ್ ಸೊತ್ತಾಗಿರುವ ಮಸ್ಜಿದನ್ನೂ ಅತಿಕ್ರಮಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

- Advertisement -

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಸಮಾಜದ ಶಾಂತಿ, ಸಾಮರಸ್ಯ ಕೆಡಿಸುವ ಇಂತಹ ಕೋಮುವಾದಿ ಶಕ್ತಿಗಳನ್ನು ಕಾನೂನು ಕ್ರಮದ ಮೂಲಕ ನಿಯಂತ್ರಿಸಬೇಕು. ಮುಸ್ಲಿಮರ ಪ್ರಾರ್ಥನಾ ಸ್ಥಳಗಳನ್ನು ಅತಿಕ್ರಮಿಸುವ ಪ್ರಯತ್ನಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು. ಹಾಗೆಯೇ, ಆಡಳಿತ ವ್ಯವಸ್ಥೆಯ ಕೃಪಾಪೋಷಣೆಯಲ್ಲಿ ಸಂಘಪರಿವಾರ ನಡೆಸುತ್ತಿರುವ ಇಂತಹ ಪಿತೂರಿಗಳನ್ನು ಸಮುದಾಯವು ಒಂದಾಗಿ ಪ್ರಜ್ಞಾವಂತಿಕೆಯಿಂದ ಎದುರಿಸಬೇಕಾಗಿದೆ ಎಂದು ಹಾರಿಸ್ ಹನೀಫಿ ಪತ್ರಿಕಾ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

Join Whatsapp