ಬಡ ಮುಸ್ಲಿಮರನ್ನು ತಾಲಿಬಾನಿಗಳು ಎಂದು ಕರೆಯುವುದು ನಿಲ್ಲಿಸಿ | ಉವೈಸಿ

Prasthutha|

ಹೈದರಾಬಾದ್ : ಕೇಂದ್ರ ಸರಕಾರವು ತಾಲಿಬಾನ್‌ ಕುರಿತು ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಉವೈಸಿ ದೂರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ತಾಲಿಬಾನ್‌ ಅನ್ನು ಕೇಂದ್ರ ಸರಕಾರವು ಉಗ್ರ ಸಂಘಟನೆ ಎಂದು ಗುರುತಿಸಬೇಕು. ಇಲ್ಲವೇ, ಬಡ ಮುಸ್ಲಿಮರನ್ನು ತಾಲಿಬಾನಿಗಳು ಎಂದು ಕರೆಯುವುದನ್ನು ನಿಲ್ಲಿಸಬೇಕು” ತಾಕೀತು ಮಾಡಿದ್ದಾರೆ.

- Advertisement -

ತಾಲಿಬಾನ್‌ ಉಗ್ರ ಸಂಘಟನೆಯೋ, ಅಲ್ಲವೋ ಎನ್ನುವುದನ್ನು ಪ್ರಧಾನಿ ಮೋದಿ ಸರ್ಕಾರ ದೇಶಕ್ಕೆ ತಿಳಿಸಬೇಕು. ತಾಲಿಬಾನ್‌ ಉಗ್ರ ಸಂಘಟನೆ ಎಂದು ಕೇಂದ್ರ ಸರ್ಕಾರ ಹೇಳಿದ್ದಲ್ಲಿ, ತಾಲಿಬಾನ್‌ ಹಾಗೂ ಹಕ್ಕಾನಿ ಜಾಲವನ್ನು ಅಕ್ರಮ ಚಟುವಟಿಕೆ ಕಾಯ್ದೆಯಡಿಯಲ್ಲಿ ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗುತ್ತದೆಯೇ ಎನ್ನುವ ಬಗ್ಗೆ ಸ್ಪಷ್ಟಪಡಿಸಬೇಕು. ಮೋದಿ ಸರ್ಕಾರವು ತಾಲಿಬಾನ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಭಾವಿಸದಿದ್ದರೆ, ಬಿಜೆಪಿ ಹಾಗೂ ಅವರ ನಾಯಕರು ಪ್ರತಿಯೋರ್ವರನ್ನು ತಾಲಿಬಾನಿಗಳು ಎಂದು ಕರೆಯುವುದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಓರ್ವ ಬಡ ಮುಸ್ಲಿಂ ವ್ಯಕ್ತಿ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದರೆ, ಆತನನ್ನು ತಾಲಿಬಾನಿ ಎಂದು ಕರೆಯಲಾಗುತ್ತದೆ. ಬಿಜೆಪಿಯನ್ನು ಯಾರಾದರೂ ರಾಜಕೀಯವಾಗಿ ವಿರೋಧಿಸಿದ್ದಲ್ಲಿ ಧರ್ಮದ ಹೊರತಾಗಿಯೂ, ತಾಲಿಬಾನಿ ಮನಸ್ಥಿತಿಯವರು ಎಂದು ಹೇಳಲಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp