ಬೆಂಗಳೂರು: ಪ್ರತಿಭಟನೆ ಸಭೆ, ಸಮಾವೇಶಗಳು ನಡೆಯುವ ಫ್ರೀಡಂಪಾರ್ಕ್ನಲ್ಲಿ ಇಂದು ಬೆಳಿಗ್ಗೆ ಹೆಜ್ಜೇನು ದಾಳಿ ನಡೆಸಿದ್ದು ಭದ್ರತೆಗೆ ನಿಯೋಜನೆಗೊಂಡಿದ್ದ 10 ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ದಿಢೀರ್ ಹೆಜ್ಜೇನು ದಾಳಿ ಓರ್ವ ಇನ್ಸ್ ಪೆಕ್ಟರ್ ಸೇರಿದಂತೆ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಗೊಂಡ ಇಬ್ಬರು ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದ್ದಕ್ಕಿದ್ದಂತೆ ಗುಂಪು ಗುಂಪಾಗಿ ಬಂದ ಹೆಜ್ಜೇನುಗಳಿಂದ ತಪ್ಪಿಸಲು ಪೊಲೀಸ್ ಸಿಬ್ಬಂದಿ ಸೇರಿ ಹಲವರು ಪ್ರಯಾಸ ಪಡಬೇಕಾಯಿತು. ಓಡುತ್ತಿದ್ದ ಪೊಲೀಸರನ್ನು ಹೆಜ್ಜೇನು ಬೆನ್ನಟ್ಟಿ ದಾಳಿ ನಡೆಸಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.