ಏಕಾಂಗಿಯಾಗಿರಿ: ಜನಸಂಖ್ಯಾ ನಿಯಂತ್ರಿಸಲು ನಾಗಾಲ್ಯಾಂಡ್’ಸಚಿವರ ವಿಚಿತ್ರ ಪರಿಹಾರ ಮಂತ್ರ !

Prasthutha|

ನಾಗಾಲ್ಯಾಂಡ್: ವಿಶ್ವದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಲು ‘ಏಕಾಂಗಿಯಾಗಿರಿ’ ಎಂಬ ವಿಚಿತ್ರ ಪರಿಹಾರವನ್ನು ಸೂಚಿಸಿರುವ ನಾಗಾಲ್ಯಾಂಡ್’ನ ಬಿಜೆಪಿ ಸರ್ಕಾರದ ಸಚಿವ ಟೆಮ್ಝನ್ ಇಮ್ನಾ ಮತ್ತೊಮ್ಮೆ ಸಖತ್ ಟ್ರೋಲ್ ಗೊಳಗಾಗಿದ್ದಾರೆ.
ಈ ಹಿಂದೆ ವರ್ಣಭೇದ ನೀತಿಯನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ಅಪಹಾಸ್ಯಕ್ಕೆ ಈಡಾಗಿತ್ತು.

- Advertisement -

ವಿಶ್ವ ಜನಸಂಖ್ಯಾ ದಿನದಂದು ಟ್ವೀಟ್ ಮಾಡಿರುವ ಸಚಿವ ಇಮ್ನಾ ಅವರು, ‘ಜನಸಂಖ್ಯೆ ಹೆಚ್ಚಳ ಸಮಸ್ಯೆಗಳ ಬಗ್ಗೆ ನಾವು ಸಂವೇದನಾಶೀಲರಾಗಿರೋಣ. ಮಗುವನ್ನು ಹೆರುವ ಕುರಿತು ತಿಳುವಳಿಕೆಯನ್ನು ಬೆಳೆಸೋಣ ಅಥವಾ ನನ್ನಂತೆ ಏಕಾಂಗಿಯಾಗಿರಿ ಮತ್ತು ಇದರೊಂದಿಗೆ ಒಟ್ಟಾಗಿ ಸುಸ್ಥಿರ ಭವಿಷ್ಯಕ್ಕಾಗಿ ಕೊಡುಗೆ ನೀಡಬಹುದು. ಇಂದೇ ಏಕಾಂಗಿಯಾಗುವ ಆಂದೋಲನಕ್ಕೆ ಧುಮುಕಿರಿ ಎಂದು ಕರೆ ನೀಡಿದ್ದಾರೆ.

ಸದ್ಯ ಜನಸಂಖ್ಯಾ ಕುರಿತ ಸಚಿವರ ಟ್ವೀಟ್’ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ನೆಟ್ಟಿಗರಿಂದ ಸಖತ್ ಟ್ರೋಲ್’ಗೆ ಒಳಗಾಗಿದ್ದಾರೆ.

- Advertisement -

ಈಶಾನ್ಯದ ಜನರು ಎದುರಿಸುತ್ತಿರುವ ವರ್ಣಭೇದ ನೀತಿಯ ವಿರುದ್ಧ ಹಾಸಮಯ ಶೈಲಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಇಮ್ನಾ, ‘ಸಣ್ಣ ಕಣ್ಣುಗಳನ್ನು ಹೊಂದುವುದರಿಂದ ಹಲವು ಪ್ರಯೋಜನಗಳಿವೆ. ಸಣ್ಣ ಕಣ್ಣುಗಳ ಮೂಲಕ ಕಡಿಮೆ ಕೊಳಕು ಒಳಪ್ರವೇಶಿಸುತ್ತದೆ. ಅಲ್ಲದೆ ನಾವು ವೇದಿಕೆಯಲ್ಲಿದ್ದಾಗ ಮತ್ತು ಸುದೀರ್ಘ ಕಾರ್ಯಕ್ರಮದ ವೇಳೆ ಸುಲಭವಾಗಿ ನಿದ್ರೆಗೆ ಜಾರಬಹುದು ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಕುರಿತ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.

Join Whatsapp