ನಾಳೆ ರಾಜ್ಯಾದ್ಯಂತ TET ಪರೀಕ್ಷೆ; ಇಲ್ಲಿದೆ ಮಾಹಿತಿ

Prasthutha|

ಬೆಂಗಳೂರು: ರಾಜ್ಯಾದ್ಯಂತ ನಾಳೆ(ಸೆ.03) ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಎರಡು ಅರ್ಹತಾ ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿ ಮುಂದಾಗಿದೆ. ಅದರಂತೆ ರಾಜ್ಯದ 35 ಶೈಕ್ಷಣಿಕ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ ಏರ್ಪಡಿಸಲಾಗಿದೆ.

- Advertisement -

 ಇನ್ನು ಅಧಿಕೃತ ಅಧಿಸೂಚನೆಯ ಪ್ರಕಾರ, ಪರೀಕ್ಷೆಯ ಮೊದಲ ಪತ್ರಿಕೆಯು ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 12:00 ರವರೆಗೆ ನಡೆಯಲಿದ್ದು, ಎರಡನೇ ಪತ್ರಿಕೆಯು ಮಧ್ಯಾಹ್ನ 02:00 ರಿಂದ ಸಂಜೆ 04:30 ರವರೆಗೆ ನಡೆಯಲಿದೆ. ಪರೀಕ್ಷೆಯ ಅವಧಿಯು 2.30 ನಿಮಿಷಗಳು ನಿಗದಿಪಡಿಸಲಾಗಿದೆ.

ಇನ್ನು ರಾಜ್ಯದಾದ್ಯಂತ ವಿವಿಧ ಶಾಲಾ ಹಂತಗಳಲ್ಲಿ ಬೋಧಕ ಹುದ್ದೆಗಳಿಗೆ ಸೂಕ್ತವಾದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಈ ಪರೀಕ್ಷೆಯನ್ನು ನಡೆಸುತ್ತಿದೆ. ಪತ್ರಿಕೆ -1, 1 ರಿಂದ 5 ನೇ ತರಗತಿ ಭೋದಿಸುವ ಶಿಕ್ಷಕರಿಗಾಗಿ ನಡೆಸಲಾಗುತ್ತಿದ್ದು, 1,43,705 ಅರ್ಜಿ ಸಲ್ಲಿಕೆಯಾಗಿದೆ. 544 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಪತ್ರಿಕೆ -2, ಇದನ್ನು 6 ರಿಂದ 8 ನೇ ತರಗತಿ ಭೋದಿಸುವ ಶಿಕ್ಷಕರಿಗಾಗಿ ನಡೆಸಲಾಗಿದ್ದು, 1,89,994 ಅರ್ಜಿ ಸಲ್ಲಿಕೆಯಾಗಿದೆ. ಮತ್ತು 711 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಗಳನ್ನು ಏರ್ಪಡಿಸಲಾಗಿದೆ.

- Advertisement -

ರಾಜ್ಯದಲ್ಲಿ ಖಾಲಿಯಿರುವ ಶಿಕ್ಷಕರನ್ನು ತುಂಬಿಕೊಳ್ಳುವ ಸಲುವಾಗಿ DSE ಕರ್ನಾಟಕವು (ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ) ಜುಲೈ 14 ರಂದು KARTET 2023 ಅಧಿಸೂಚನೆಯನ್ನು ಬಿಡುಗಡೆ ಮಾಡಿತ್ತು. ಬಳಿಕ ಪರೀಕ್ಷೆಯನ್ನು ಸೆಪ್ಟಂಬರ್​ 3 ರಂದು ನಡೆಸಲಾಗುವುದು ಎಂದು ತನ್ನ ವೆಬ್​ಸೈಟ್​ನಲ್ಲಿ ತಿಳಿಸಿತ್ತು. ಇದೀಗ ನಾಳೆ ಪರೀಕ್ಷೆ ನಡೆಯುತ್ತಿದೆ.

Join Whatsapp