ಉಡುಪಿ: ಕರಾವಳಿಯ ಪ್ರವಾಸಿ ತಾಣದಲ್ಲಿ ಈಗ ತೇಲುವ ಸೇತುವೆ ಗಮನ ಸೆಳೆಯುತ್ತಿದ್ದು ರಾಜ್ಯದಲ್ಲೇ ಮೊದಲ ಫ್ಲೋಟಿಂಗ್ ಬ್ರಿಡ್ಜ್ ಉಡುಪಿಯಲ್ಲಿ ಆರಂಭವಾಗಿದೆ.
ಪ್ರವಾಸಿ ತಾಣ ಮಲ್ಪೆ ಕಡಲ ಕಿನಾರೆಯಲ್ಲಿ ತೇಲುವ ಸೇತುವೆ ಆರಂಭವಾಗಿದ್ದು, ಶಾಸಕ ರಘುಪತಿ ಭಟ್ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತೇಲುವ ಸೇತುವೆ ಅನಾವರಣ ಮಾಡಿದ್ದಾರೆ. ಶಾಸಕ ರಘುಪತಿ ಭಟ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇತುವೆ ಮೇಲೆ ತೇಲುವ ಅನುಭವ ಪಡೆದಿದ್ದು ಖುಷಿಯನ್ನು ಹಂಚಿಕೊಂಡಿದ್ದಾರೆ.
80 ಲಕ್ಷ ರೂಪಾಯಿ ವೆಚ್ಚದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದ್ದು ಇದು ರಾಜ್ಯದಲ್ಲೇ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ