ಮಡಿಕೇರಿ: ಹಾಕಿ ಇಂಡಿಯಾ ವತಿಯಿಂದ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ಮಾ.25 ರಿಂದ ಏ.3 ರವರೆಗೆ ನಡೆಯಲಿರುವ 12ನೇ ಜೂನಿಯರ್ ಮಹಿಳಾ ಹಾಕಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ತಂಡದಲ್ಲಿ ಕೊಡಗಿನ ಹನ್ನೆರಡು ಮಂದಿ ಆಟಗಾರ್ತಿಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಒಟ್ಟು ಹದಿನೆಂಟು ಮಂದಿ ಇರುವ ತಂಡದಲ್ಲಿ ಕೊಡಗಿನ ವಿದ್ಯಾರ್ಥಿನಿಯರೇ ಹನ್ನೆರಡು ಮಂದಿ ಇರುವುದು ವಿಶೇಷ.
ಮಡಿಕೇರಿ ಸಾಯಿ ಹಾಸ್ಟೇಲ್ ನ ಪಾಂಡಂಡ ದೇಚಮ್ಮ ಗಣಪತಿ, ಅಪ್ಸರ ಹೆಚ್.ಎ., ಸೀಮಾ ಆನಂದ್ರಾವ್, ಮೈಸೂರು ಡಿವೈಎಸ್ನ ಬಾರಿಕೆ ಜೀವಿತಾ ಗಿರೀಶ್, ಕೈಬಿಲಿ ದಿಲನ್ ಜಯಪ್ರಕಾಶ್ (ಗೋಲ್ ಕೀಪರ್), ಕುಂದಚಿರ ತಾಜ್ ಬೆಳ್ಯಪ್ಪ, ಜಾಹ್ನವಿ ಶಿವಣ್ಣ, ನಿಸರ್ಗ ಬಸವರಾಜು, ಸಿದ್ದಗಂಗಾ ಬಸವರಾಜಪ್ಪ, ಮಣಿ ಹನುಮಂತನಾಯಕ, ಕೀರ್ತನಾ ಮಂಜುನಾಥ ಇವರುಗಳು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಡಿ.ಎನ್.ತೇಜಸ್ವಿನಿ ನಾಯಕಿಯಾಗಿರುವ ತಂಡದಲ್ಲಿ ಕಾವೇರಿ ಲೆಂಕಣ್ಣವರ್, ಸಿ.ಎಂ.ಸಹನಾ, ಉದುಮುಲ ಸೌಮ್ಯ, ಖುಷಿ ಎಂ.ಜೈನ್, ದೀಪಿಕಾ ಬಿ ಇತರ ಆಟಗಾರ್ತಿಯರಾಗಿದ್ದಾರೆ.
ತಂಡದ ತರಬೇತುದಾರರಾಗಿ ಬಿ.ಎಂ.ಕೋಮಲ ಹಾಗೂ ವ್ಯವಸ್ಥಪಕರಾಗಿ ಜಿ.ಆರ್.ಧರ್ಮೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅಂಜಪರವಂಡ ಬಿ.ಸುಬ್ಬಯ್ಯ ತಿಳಿಸಿದ್ದಾರೆ. ತಂಡ ಈಗಾಗಲೇ ಆಂಧ್ರ ಪ್ರದೇಶದತ್ತ ಪ್ರಯಾಣ ಬೆಳೆಸಿದೆ.