ಬೆಂಗಳೂರು: ಆರು ಜನ ನಕ್ಸಲ್ ನಾಯಕರ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾಗಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತ ಬದಲಾಗಿ ಖುದ್ದು ಸಿಎಂ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಶರಣಾಗರಾಗುತ್ತಿದ್ದಾರೆ.
ಹೀಗಾಗಿ ಆರು ಜನ ನಕ್ಸಲರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಸಂಜೆ ವೇಳೆಗೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಶರಣಾಗಲಿದ್ದಾರೆ. ಇನ್ನು ಶರಣಾಗತಿಯಾಗುತ್ತಿರುವ ನಕ್ಸಲರಿಗೆ ರಾಜ್ಯ ಸರ್ಕಾರ, ಮೂರು ಕೆಟಗರಿಯಲ್ಲಿ ಪ್ಯಾಕೇಜ್ ಘೋಷಿಸಿದೆ.
ಶರಣಾಗತಿಯಾಗುತ್ತಿರುವ ನಕ್ಸಲರಿಗೆ ಸರ್ಕಾರ ಪ್ಯಾಕೇಜ್ ನೀಡುತ್ತಿದೆ. ಇದರಲ್ಲಿ ಮೂರು ಕೆಟಗರಿ ಇದೆ.
ಕೆಟಗರಿ ಎ: ನಮ್ಮ ರಾಜ್ಯದವರೇ ಆಗಿದ್ದು, ಆಕ್ಟಿವ್ ಆಗಿರುವಾಗ ಕೇಸ್ ಇದ್ದು ಶರಣಾಗತಿಯಾಗುತ್ತಿದ್ದರೆ 7.50 ಲಕ್ಷ ರೂ. ಹಣ ಸಿಗುತ್ತದೆ.
ಕೆಟಗರಿ ಬಿ: ನಕ್ಸಲರು ಹೊರರಾಜ್ಯದವನಾಗಿದ್ದು, ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೆ 4 ಲಕ್ಷ ರೂ. ಪ್ಯಾಕೇಜ್ ಸಿಗುತ್ತದೆ.
ಕೆಟಗರಿ ಸಿ: ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿ, ಪ್ರಕರಣಗಳು ಇದ್ದರೆ 2 ಲಕ್ಷ ರೂ. ಹಣವನ್ನು ಸರ್ಕಾರ ನೀಡಲಿದೆ.
ಶರಣಾಗುವ ನಕ್ಸಲರು ಯಾರು?
ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
ವನಜಾಕ್ಷಿ (ಬಾಳೆಹೊಳೆ ಕಳಸ)
ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
ಮಾರಪ್ಪ ಅರೋಳಿ (ರಾಯಚೂರು)
ವಸಂತ ಟಿ (ತಮಿಳುನಾಡು)
ಎನ್. ಜೀಶಾ (ಕೇರಳ)