ರಾಜ್ಯದ 2ನೇ ಹಂತದ ಚುನಾವಣೆ: ಕಲಬುರಗಿ ಅತಿ ಕಡಿಮೆ,ಚಿಕ್ಕೋಡಿ ಅತಿ ಹೆಚ್ಚು ಮತದಾನ

Prasthutha|

ಬೆಂಗಳೂರು: ರಾಜ್ಯದ ಎರಡನೇ ಹಂತದ ಚುನಾವಣೆಯಲ್ಲಿ ನಿನ್ನೆ 21 ಮಹಿಳೆಯರು ಸೇರಿದಂತೆ ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಇಬ್ಬರು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಸಚಿವರೊಬ್ಬರ ಪತ್ನಿ, ಹಾಲಿ ಸಂಸದರ ಪತ್ನಿ ಹಾಗೂ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷರ ಅಳಿಯ ಚುನಾವಣಾ ಕಣದಲ್ಲಿ ಇದ್ದರು.

- Advertisement -

ಕಲಬುರಗಿಯಲ್ಲಿ ಅತಿಕಡಿಮೆ ಶೇ. 63.2 ರಷ್ಟು ಮತದಾನವಾಗಿದ್ದರೆ, ಚಿಕ್ಕೋಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.77.1 ರಷ್ಟು ಮತದಾನವಾಗಿದೆ.

.ಬೆಳಗಾವಿ ಶೇ.70.5, ಬಾಗಲಕೋಟೆ ಶೇ.71 ಬಿಜಾಪುರ ಶೇ.65.4 ರಾಯಚೂರು ಶೇ.64.2 ಬೀದರ್‌ ಶೇ.65.3, ಕೊಪ್ಪಳ ಶೇ.70.5, ಬಳ್ಳಾರಿ ಶೇ.73.1 ಹಾವೇರಿ ಶೇ.76.3, ಧಾರವಾಡ ಶೇ.72.1, ಉತ್ತರಕನ್ನಡ ಶೇ.74.1, ದಾವಣಗೆರೆ ಶೇ.75.2 ಶಿವಮೊಗ್ಗದಲ್ಲಿ ಶೇ.76.8ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ದೇಶದ ಮೂರನೇ ಹಂತದ ಚುನಾವಣೆಯಲ್ಲಿ 11 ರಾಜ್ಯಗಳ 93‌ ಲೋಕ ಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 65ರಷ್ಟು ಮತದಾನವಾಗಿದೆ. ಎಂದು ತಿಳಿದು ಬಂದಿದೆ. ನಿನ್ಮೆಗೆ ಲೋಕಸಭೆಯ ಶೇ 50ರಷ್ಟು (283 ಕ್ಷೇತ್ರ) ಮತದಾನ ಪೂರ್ಣಗೊಂಡಂತಾಗಿದೆ.



Join Whatsapp