ಸ್ಟ್ಯಾಂಡ್-ಅಪ್ ಕಾಮಿಡಿ ಶೋ: ಮುನಾವರ್ ಫಾರೂಕಿ ಗೆ ಮತ್ತೆ ಅವಕಾಶ ನಿರಾಕರಣೆ

Prasthutha|

ನವದೆಹಲಿ: ಬಿಜೆಪಿ ಹರ್ಯಾಣ ಘಟಕ ನೀಡಿದ ದೂರಿನನ್ವಯ ಈ ತಿಂಗಳ ಕೊನೆಯಲ್ಲಿ ನಡೆಯಬೇಕಾಗಿದ್ದ ಮೂರು ದಿನಗಳ ಕಾರ್ಯಕ್ರಮದಿಂದ ಖ್ಯಾತ ಸ್ಟ್ಯಾಂಡ್ – ಆಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರನ್ನು ಕೈಬಿಡಲಾಗಿದೆ.

- Advertisement -

ಬಿಜೆಪಿ ಹರ್ಯಾಣ ಘಟಕದ ಐಟಿ ವಿಭಾಗದ ಮುಖ್ಯಸ್ಥ ಅರುಣ್ ಯಾದವ್, ಗುರ್ಗಾಂವ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಫಾರೂಕಿ ಅವರು ತನ್ನ ಪ್ರದರ್ಶನ ಮತ್ತು ಕಾರ್ಯಕ್ರಮದ ಬಹಿರಂಗ ವೇದಿಕೆಯಲ್ಲಿ ಹಿಂದೂ ಧಾರ್ಮಿಕ ನಂಬಿಕೆ, ದೇವತೆಗಳನ್ನು ಅವಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕಾರ್ಯಕ್ರಮದಿಂದ ಕೈಬಿಡಬೇಕೆಂದು ಯಾದವ್ ಒತ್ತಾಯಿಸಿದ್ದರು.

ಫಾರೂಕಿ ಅವರ ಕಾರ್ಯಕ್ರಮದ ಪ್ರತಿ ಚಟುವಟಿಕೆಗಳು ಹಿಂದೂ ಧಾರ್ಮಿಕ ನಂಬಿಕೆ ಧಕ್ಕೆ ತಂದಿವೆ. ತನ್ನ ಕಾರ್ಯಕ್ರಮದ ಮೂಲಕ ಕೋಮು ಸೌಹಾರ್ದತೆಯನ್ನು ಕದಡಲು ಯತ್ನಿಸಿದ್ದಾರೆ ಎಂದು ಯಾದವ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಮಾತ್ರವಲ್ಲ ಸ್ಟ್ಯಾಂಡ್ – ಅಪ್ ಕಾಮಿಡಿ ಶೋ ಮೂಲಕ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವ ಕೆಲವು ವೀಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರ್ಗಾಂವ್ ಕಾರ್ಯಕ್ರಮದದಿಂದ ಫಾರೂಕಿ ಅವರನ್ನು ಕಾರ್ಯಕ್ರಮದಿಂದ ಕೈಬಿಡಲಾಗಿದೆ.

ಈ ಹಿಂದೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮುಂಬೈನಲ್ಲಿ ನಿಗದಿಯಾಗಿದ್ದ ಫಾರೂಕಿ ಅವರ ಕಾರ್ಯಕ್ರಮವನ್ನು ಸಂಘಟಕರು ರದ್ದುಗೊಳಿಸಿದ್ದರು.



Join Whatsapp