ಕತಾರ್‌| ಮೈದಾನದಲ್ಲಿ ಕುಳಿತು ಖುರ್‌ಆನ್‌ ಓದಿದ ಮಕ್ಕಳು ; ಹಳೆಯ ವಿಡಿಯೋ ವೈರಲ್

Prasthutha|

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್‌ಬಾಲ್‌ ಮಹಾಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಲ್ಫ್‌ನ ಪುಟ್ಟ ಶ್ರೀಮಂತ ರಾಷ್ಟ್ರ ಕತಾರ್‌ನಲ್ಲಿ ಭಾನುವಾರ (ನವೆಂಬರ್‌ 20) ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಟೂರ್ನಿಯು ಡಿಸೆಂಬರ್‌ 18ರವರೆಗೆ ನಡೆಯಲಿದೆ.

- Advertisement -

ಭಾನುವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಟೂರ್ನಿಯ ಉದ್ಘಾಟನಾ ಸಮಾರಂಭವು ಈಗಾಗಲೇ ನಡೆದಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಂಪ್ರದಾಯಿಕ ಅರಬ್‌ ಉಡುಗೆ ಧರಿಸಿದ ಮಕ್ಕಳು ಮೈದಾನದ ಮಧ್ಯದಲ್ಲಿ ಕುಳಿತು ಖುರ್‌ಆನ್‌ ಪಠಿಸುವ ಮೂಲಕ ಕತಾರ್‌ ಫಿಫಾ ವಿಶ್ವಕಪ್‌ ಕೂಟಕ್ಕೆ ಚಾಲನೆ ನೀಡಲಾಗಿದೆ ಎಂಬ ಸುದ್ದಿಯು ವಿಡಿಯೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಖ್ಯಾತನಾಮರು ಸೇರಿದಂತೆ ಹಲವು ಮಂದಿ ಈ ವಿಡಿಯೋವನ್ನು ತಮ್ಮ ಟ್ವೀಟರ್‌ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.‌

ಆದರೆ ಈ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಿದಾಗ ಇದು ಕಳೆದ ವರ್ಷದ ವಿಡಿಯೋ ಎಂಬುದು ಗೊತ್ತಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 1.9 ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ʻಯಲ್ಲಕೊರʼ ಮತ್ತು ದೋಹಾ ನ್ಯೂಸ್‌ನ ಅಧಿಕೃತ ಟ್ವಟಿರ್‌ ಖಾತೆಯಿಂದ ಈ ವಿಡಿಯೋ ಅಕ್ಟೋಬರ್‌ 24ರಂದು ಪೋಸ್ಟ್‌ ಮಾಡಲಾಗಿದೆ.

- Advertisement -

ವಿಡಿಯೋದಲ್ಲಿ ನೀಡಿರುವ ಮಾಹಿತಿಯ ಪ್ರಕಾರ ವಿಶ್ವಕಪ್‌ ಟೂರ್ನಿಯ ಭಾಗವಾಗಿ ಕತಾರ್‌ ನಿರ್ಮಿಸಿದ್ದ ಏಳು ನೂತನ ಸ್ಟೇಡಿಯಂಗಳ ಪೈಕಿ, 6ನೇಯದಾಗಿ ನಿರ್ಮಾಣ ಕಾರ್ಯಗಳು ಪೂರ್ತಿಯಾದ ಅಲ್-ತುಮಾಮಾ ಸ್ಟೇಡಿಯಂ ಉದ್ಘಾಟನೆಯ ಸಂದರ್ಭದ ವಿಡಿಯೋ ಇದಾಗಿದೆ.

Join Whatsapp