SSLC ಫಲಿತಾಂಶ ಪ್ರಕಟ: ನಾಲ್ವರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

Prasthutha|

ಬೆಂಗಳೂರು: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.

- Advertisement -


ಬೆಂಗಳೂರಿನ ನ್ಯೂ ಮೆಕಾಲೆ ಶಾಲೆಯ ಭೂಮಿಕಾ ಪೈ, ವಿಜಯಪುರದ ಆಕ್ಸ್ ಫರ್ಡ್ ಹೈಸ್ಕೂಲ್ ನ ಭೀಮನಗೌಡ ಪಾಟೀಲ್, ಬೆಳಗಾವಿ ಜಿಲ್ಲೆಯ ಶ್ರೀ ಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್ ಹಿರೆಹೊಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜಿಎಸ್ ಶಾಲೆ ಯಶಸ್ ಗೌಡ625ಕ್ಕೆ 625 ಅಂಕ ಪಡೆದವರು.


ಈ ವರ್ಷ ಶೇ 83.89 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 8,35,102 ವಿದ್ಯಾರ್ಥಿಗಳಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.



Join Whatsapp