ಫಲಿತಾಂಶಕ್ಕೆ ಮುನ್ನವೇ ಈಜಲು ಹೋಗಿದ್ದ ಎಸೆಸೆಲ್ಸಿ ವಿದ್ಯಾರ್ಥಿ ಕೆರೆ ಪಾಲು

Prasthutha|

ಬೆಂಗಳೂರು: ಸ್ನೇಹಿತರ ಜೊತೆ ಈಜಲು ತೆರಳಿದ್ದ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಹೆಸರಘಟ್ಟ ಕೆರೆಯಲ್ಲಿ ನಡೆದಿದೆ. ಎಂ.ಎಸ್.ಪಾಳ್ಯದ ಸಯ್ಯದ್ ಆಕಿಬ್ (16) ಮೃತ ಬಾಲಕ. ಅಮೀನ್ ಮಹಮ್ಮದ್, ಅನ್ವರ್ ಮಹಮ್ಮದ್ ಸ್ನೇಹಿತರ ಜೊತೆ ಈಜಲು ತೆರಳಿದ್ದ. ಮೃತ ಬಾಲಕ ಅನ್ಸರ್ ಪಾಶ ಮತ್ತು ಶಿಕ್ಷಕಿ ಅಭೀದಾ ದಂಪತಿಗಳ ಮಗ. ಕೆರಯ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ಯುವಕ ಇವತ್ತು ಫಲಿತಾಂಶ ಬರುವ ದಿನ ಮೊದಲೇ ಬಾಲಕ ಸಾವಿಗೀಡಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬ ದುಃಖತಪ್ತರಾಗಿದ್ದಾರೆ. ಪೀಣ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ‌‌ ಬಾಲಕನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ‌ಕೈಗೊಂಡಿದ್ದಾರೆ.



Join Whatsapp