ಮಂಡ್ಯ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಬಳಿಯಲ್ಲಿ ಸಂಕೀರ್ತನಾ ಯಾತ್ರೆ ಸಾಗುತ್ತಿರುವಾಗ ಮಾಲಾಧಾರಿಗಳು ಮಸೀದಿಯ ಬಳಿಯಲ್ಲೇ ಜೈ ಶ್ರೀರಾಮ್ ಘೋಷಣೆ ಮೊಳಗಿಸಿ, ಈ ಮಸೀದಿ ಜಾಗ ನಮ್ಮದು, ಮಂದಿರ ಕಟ್ಟುತ್ತೇವೆ. ಆಂಜನೇಯ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ನಮಗೆ ನ್ಯಾಯ ಬೇಕು ಎಂದು ಪಟ್ಟುಹಿಡಿದಿದ ಘಟನೆ ನಡೆದಿದೆ.
ಜಾಮೀಯಾ ಮಸೀದಿಯ ಬಳಿಗೆ ಸಂಕೀರ್ತನಾ ಯಾತ್ರೆ ತಲುಪಿದ ಸಂದರ್ಭದಲ್ಲಿ ಮಸೀದಿಯ ಬಳಿಯಲ್ಲಿ ಕೆಲ ಹೊತ್ತು ನಿಲ್ಲೋದಕ್ಕೆ ಮಾಲಾಧಾರಿಗಳು ಪ್ರಯತ್ನಿಸಿದ್ದಾರೆ. ಆದ್ರೇ ಇದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ.
ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮಸೀದಿಯ ಮುಂದೆ ಮಾಲಾಧಾರಿಗಳು ಜೈ ಶ್ರೀರಾಮ್, ಹನುಮಾನ್ ಎಂಬುದಾಗಿ ಘೋಷಣೆ ಕೂಗಿದ್ದಾರೆ.
ರಸ್ತೆಯಲ್ಲಿ ಕುಳಿತು ಮಸೀದಿ ಜಾಗ ನಮ್ಮದು, ಮಂದಿರ ಕಟ್ಟುತ್ತೇವೆ. ಆಂಜನೇಯ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ನಮಗೆ ನ್ಯಾಯ ಬೇಕು ಎಂದು ಪಟ್ಟುಹಿಡಿದರು ಎನ್ನಲಾಗಿದೆ.
ಅಲ್ಲದೆ, ಮಸೀದಿಯ ಮುಂದೆ ಕರ್ಪೂರ ಹಚ್ಚಿದ ಮಾಲಾಧಾರಿಗಳು ಪೂಜೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.