ಬೆಂಗಳೂರು: ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 9 ಕೋಟಿ LPG ಸಂಪರ್ಕ ನೀಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾಡಿರುವ ಟ್ವೀಟ್ ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪಡೆದ ಒಟ್ಟು LPG ಸಂಪರ್ಕಗಳು 9 ಕೋಟಿ… ಹೆಮ್ಮೆ ಅನ್ಸಲ್ವಾ..! ಎಂದು ಟ್ವೀಟ್ ಮಾಡಿದ್ದರು, ಇದಕ್ಕೆ ನೆಟ್ಟಿಯೊಬ್ಬರು ಹೆಮ್ಮೆ ಅನ್ಸುತ್ತೆ…. ಆ 9,00,00,000 ಜನರು ತಿಂಗ್ಳ್ ತಿಂಗ್ಳು..1000 ಹಾಕಿ, ಗ್ಯಾಸ್ ಕೊಂಡು ಕೊಳ್ತಾರೆ.. ಜನರ ಮೇಲೆ ನೂ ಹೆಮ್ಮೆ ಅನ್ನಿಸ್ತದೆ… ಅಂದ್ರೆ…. 90000000 ಗುಣಿಸು 1000 ಗುಣಿಸು 12 ತಿಂಗಳು… ನಿಮಗೆ ವೋಟ್ ಮಾಡಿದ ಜನರ ಬಗ್ಗೆನೂ ಹೆಮ್ಮೆ ಇರ್ಲಿ ಸ್ವಾಮಿ ಪೂಜಾರ್ಲೆ ಅದ್ರಿಂದ ಸರ್ಕಾರಕ್ಕೆ ಎಷ್ಟ್ ಟ್ಯಾಕ್ಸ್ ಬರ್ತದೆ ಎಂದು ಚಾಟಿ ಬೀಸಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ, “ಸಿಲಿಂಡರ್ ಬೆಲೆ ಸಾವಿರ ದಾಟಿದೆ. ಜನರನ್ನು ಹಗಲು ದರೋಡೆ ಮಾಡೋಕೆ ನಿಮಗೆ ನಾಚಿಕೆ ಆಗೋಲ್ವಾ ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೊಬ್ಬರು, ಕಾಂಗ್ರೆಸ್ ಇದ್ದಾಗ 350 ರೂ.ಇದ್ದ ಸಿಲಿಂಡರ್ 1000 ಮಾಡಿದಿರಾ ನಾಚಿಕೆ ಮಾನ ಮರ್ಯಾದೆ ಇಲ್ಲಾ ಅನ್ಸಲ್ವಾ ನಿಮಗೆ ಎಂದು ಕಿಡಿಕಾರಿದ್ದಾರೆ.
ದಿನೇ ದಿನೇ ಇಂಧನ ಸೇರಿದಂತೆ ಗ್ಯಾಸ್ ಬೆಲೆ 1000ಕ್ಕಿಂತ ಅಧಿಕ ಹೆಚ್ಚಳವಾಗುತ್ತಿದ್ದು, ಈ ನಡುವೆ ಶ್ರೀನಿವಾಸ ಪೂಜಾರಿ ಈ ರೀತಿ ಟ್ವೀಟ್ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.