ಹಲಾಲ್ ಚರ್ಚೆಯ ಬಳಿಕ ಮಸೀದಿ ಧ್ವನಿವರ್ಧಕಗಳ ಮೇಲೆ ಕಣ್ಣಾಯಿಸಿದ ಶ್ರೀರಾಮಸೇನೆ

Prasthutha|

ಕಲಬುರಗಿ: ರಾಜ್ಯದಲ್ಲಿ ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಹಿಂದುತ್ವವಾದಿ ಸಂಘಟನೆಗಳು ಸೃಷ್ಟಿಸಿರುವ ಹಿಜಾಬ್ ನಿಷೇಧ, ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ , ಹಲಾಲ್ ನಿಷೇಧ ಕುರಿತಾದ ರಾದ್ದಾಂತಗಳು ಮುಗಿಯುತ್ತಿದ್ದಂತೆ ಮಸೀದಿ ಮೇಲಿನ ಧ್ವನಿವರ್ಧಕಗಳ ಮೇಲೆ ಶ್ರೀರಾಮಸೇನೆ ಕಣ್ಣಾಯಿಸಿದೆ.

- Advertisement -

ವೀಡಿಯೋ ಮೂಲಕ ನಾಲಗೆ ಹರಿಯಬಿಟ್ಟಿರುವ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಮಸೀದಿ ಮೇಲಿನ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯವಾಗುತ್ತಿದೆ. ಹೆಚ್ಚು ಶಬ್ದವಿಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೇ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ .

ಮಸೀದಿಯಲ್ಲಿನ ಧ್ವನಿವರ್ಧಕ ಗಳನ್ನು ನಿಷೇಧಿಸಬೇಕು, ಪರಿಸರ ಮಾಲನ್ಯದೊಂದಿಗೆ ಸಾಮಾನ್ಯ ಜನರಿಗೆ ಸಮಸ್ಯೆಯೂ ಆಗುತ್ತಿದೆ. ರಂಝಾನ್ ಸಮಯದಲ್ಲಿ ಸೈರನ್ ಬಳಸುವುದರಿಂದ ಜನರಿಗೆ ಸಮಸ್ಯೆಗಳು ಉಂಟಾಗುತ್ತಿದ್ದು, ಕೂಡಲೇ ಮಸೀದಿಯಲ್ಲಿನ ಧ್ವನಿವರ್ಧಕಗಳನ್ನು ನಿಷೇಧಿಸಿ ಎಮದು ಸರಕಾರವನ್ನು ಒತ್ತಾಯಿಸಿದ್ದಾರೆ.



Join Whatsapp