ಕೊಲೊಂಬೋ: ಆಹಾರ ಮತ್ತು ಔಷಧಿಗಳ ಅಗತ್ಯತೆಗಾಗಿ ಬೇರೆ ದಾರಿ ಕಾಣದ ಶ್ರೀಕಂಕಾ ಮಹಿಳೆಯರು ವೇಶ್ಯಾವೃತ್ತಿಗೆ ಇಳಿದಿದ್ದಾರೆ . ಲೈಂಗಿಕ ಉದ್ಯಮಕ್ಕೆ ಸೇರುವ ಮಹಿಳೆಯರ ಸಂಖ್ಯೆಯಲ್ಲಿ ಶೇಕಡಾ 30 ರಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ಘಟನೆ ವರದಿಯಾಗಿದೆ.
ದೇಶದ ಆರ್ಥಿಕತೆಯು ಕುಸಿಯುವ ಹಂತ ತಲುಪುತ್ತಿದ್ದಂತೆ ಜವಳಿ ಉದ್ಯಮದ ಮಹಿಳೆಯರು, ಶ್ರೀಲಂಕಾದಲ್ಲಿ ಉದ್ಯೋಗ ನಷ್ಟ ಅಥವಾ ಕೆಲಸದಿಂದ ತೆಗೆದುಹಾಕುವ ಬೆದರಿಕೆಗಳ ನಂತರ ಲೈಂಗಿಕ ವೃತ್ತಿಗೆ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ. ಆರ್ಥಿಕ ಮುಗ್ಗಟ್ಟು ಮತ್ತು ಹಣದುಬ್ಬರವು ಅವರನ್ನು ಈ ವೃತ್ತಿಗೆ ಬಲವಂತವಾಗಿ ದೂಡುತ್ತಿದೆ ಎಂದು ಖಚಿತ ಮೂಲಗಳು ತಿಳಿಸಿವೆ.
ಬೇರೆ ಯಾವುದೇ ವೃತ್ತಿಪರ ಕೌಶಲ್ಯಗಳನ್ನು ಹೊಂದಿಲ್ಲದ ಕಾರಣ ಅವರು ಆಯ್ಕೆಗಳಿಂದ ಹೊರಗುಳಿದಿದ್ದು, ದೈನಂದಿನ ಅವಶ್ಯಕತೆಗಳಿಗಾಗಿ ಪರ್ಯಾಯ ಉದ್ಯೋಗವಾಗಿ ವೇಶ್ಯಾವಾಟಿಕೆಗೆ ಕಾಲಿಟ್ಟಿದ್ದಾರೆ.